ಮಹಾರಾಷ್ಟ್ರದ ಸರ್ಕಾರ ಬಾಬರಿ ಮಸೀದಿಯಂತೆ ಇದೆ; ಫಡ್ನವಿಸ್
ಮುಂಬೈ; ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಬಾಬರಿ ಮಸೀದಿಯಂತಿದೆ ಎಂದು ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಲೇವಡಿ ಮಾಡಿದ್ದಾರೆ. ಮುಂಬೈನಲ್ಲಿ ಮಾತನಾಡಿರುವ ಅವರು, ಉದ್ಧವ್ ಠಾಕ್ರೆ ಆಡಳಿತದ ವಿರುದ್ಧ ಹರಿಹಾಯ್ದಿದ್ದಾರೆ.
ನಿಮ್ಮ ಸರ್ಕಾರದ ರಚನೆ ಬಾಬ್ರಿ ಮಸೀದಿ ರಚನೆಯಂತೆ ಕಾಣುತ್ತಿದೆ. ಅದನ್ನು ನಾನು ಉರುಳಿಸುವವರೆಗೂ ವಿಶ್ರಮಿಸೋದಿಲ್ಲ ಎಂದ ಫಡ್ನವಿಸ್, ನಾವು ಕೇವಲ ಹನುಮಾನ್ ಚಾಲೀಸಾವನ್ನು ಜಪಿಸಿದ್ದೇವೆ. ಬಾಳಾಸಾಹೇಬ್ ಠಾಕ್ರೆ ತಮ್ಮ ಮಗನ ಆಳ್ವಿಕೆಯಲ್ಲಿ ಹನುಮಾನ್ ಚಾಲೀಸಾವನ್ನು ಓದುವುದು ದೇಶದ್ರೋಹ ಮತ್ತು ಔರಂಗಾಜೇಬನ ಸಮಾಧಿಗೆ ಭೇಟಿ ನೀಡುವುದು ರಾಜ್ಯ ಶಿಷ್ಟಾಚಾರ ಎಂದು ಭಾವಿಸಿದ್ದೀರಾ? ಎಂದು ಫಡ್ನವಿಸ್ ಪ್ರಶ್ನಿಸಿದರು. ಶಿವಸೇನೆ ಅವರು ಮೊನ್ನೆ ರ‍್ಯಾಲಿಯನ್ನು ನಡೆಸಿ ಅದನ್ನು ಮಾಸ್ಟರ್ ಸಭೆ ಎಂದು ಕರೆದರು. ಆದರೆ, ಅದು ನಮಗೆ ನಗುವಿನ ಸಭೆಯಂತಿತ್ತು ಎಂದು ಕುಹಕವಾಡಿದರು.