Bengaluru

ಭರ್ಜರಿ ʻಖುಷಿʼಯಲ್ಲಿ ಸಮಂತಾ ಹಾಗೂ ವಿಜಯ್‌ ದೇವರಕೊಂಡ

ಬೆಂಗಳೂರು; ನಾಗಚೈತನ್ಯ ಜೊತೆ ವಿಚ್ಛೇದನ ಪಡೆದ ನಂತರ ನಟಿ ಸಮಂತಾ ರುತ್‌ಪ್ರಭು ಅವರು ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಈಗ ವಿಜಯ್‌ ದೇವರಕೊಂಡ ಜೊತೆಗಿನ ಹೊಸ ಸಿನಿಮಾದಿಂದಾಗಿ ಅವರು ಸುದ್ದಿಯಾಗಿದ್ದಾರೆ. ಸಮಂತಾ ಮತ್ತು ವಿಜಯ್ ದೇವರಕೊಂಡ ಅಭಿನಯದ ಹೊಸ ಸಿನಿಮಾ ‘ಖುಷಿ‘ ಡಿಸೆಂಬರ್‌ನಲ್ಲಿ ಬಿಡುಗಡೆಯಾಗುತ್ತಿದೆ.

ಸಮಂತಾ ಅವರು ಖುಷಿ ಚಿತ್ರದ ಪೋಸ್ಟರ್ ಅನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ತಮ್ಮ ಹೊಸ ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿದೆ ಎಂಬುದನ್ನು ತಿಳಿಸಿದ್ದಾರೆ. ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂನಲ್ಲಿ ಹೊಸ ಚಿತ್ರ ‘ಖುಷಿ‘ ಡಿಸೆಂಬರ್ 23ರಂದು ರಿಲೀಸ್‌ ಆಗಲಿದೆ. ಸಮಂತಾ ಮತ್ತು ವಿಜಯ್ ಜೋಡಿ ಕಾಶ್ಮೀರದಲ್ಲಿ ಸಿನಿಮಾ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಅಂದಹಾಗೆ, ದಶಕಗಳ ಹಿಂದೆ ಪವನ್‌ ಕಲ್ಯಾಣ್‌ ಅವರು ಖುಷಿ ಹೆಸರಿನಲ್ಲೇ ಸಿನಿಮಾ ಮಾಡಿದ್ದರು. ಅದು ಸೂಪರ್‌ ಡೂಪರ್‌ ಹಿಟ್‌ ಆಗಿತ್ತು. ಈ ಕಾರಣಕ್ಕಾಗಿ ಹೊಸ ಖುಷಿ ಕೂಡಾ ಹಿಟ್‌ ಆಗಬಹುದೆಂಬ ಲೆಕ್ಕಾಚಾರಗಳಿದ್ದು, ಸಿನಿಪ್ರಿಯರಲ್ಲಿ ನಿರೀಕ್ಷೆಗಳು ಮೂಡಿವೆ.

Share Post