International

ಅಬುದಾಬಿ ದೊರೆ ಶೇಕ್ ಖಲೀಫಾ ಬಿನ್ ಜಾಯೆದ್‌ ಇನ್ನಿಲ್ಲ

ದುಬೈ: ಯುಎಇ ಅಧ್ಯಕ್ಷ ಮತ್ತು ಅಬುದಾಬಿ ದೊರೆ ಶೇಕ್ ಖಲೀಫಾ ಬಿನ್ ಜಾಯೆದ್‌ ಅಲ್ ನಹ್ಯಾನ್ ನಿಧನರಾಗಿದ್ದಾರೆ. ಇದನ್ನು ಅಲ್ಲಿನ ಅಧ್ಯಕ್ಷೀಯ ವ್ಯವಹಾರಗಳ ಸಚಿವಾಲಯ ದೃಢಪಡಿಸಿದೆ. 2004 ನವೆಂಬರ್‌ 3 ರಿಂದ ಶೇಕ್ ಖಲೀಫಾ ಅವರು ಯುಎಇ ಅಧ್ಯಕ್ಷರಾಗಿ ಹಾಗೂ ಅಬು ದಾಬಿಯ ದೊರೆಯಾಗಿ ಸೇವೆ ಸಲ್ಲಿಸುತ್ತಿದ್ದರು.

ಯುಎಇ ಅಧ್ಯಕ್ಷೀಯ ವ್ಯವಹಾರಗಳ ಸಚಿವಾಲಯವು ಶೇಕ್‌ ಖಲೀಫಾ ಅವರ ನಿಧನಕ್ಕೆ ಸಂತಾಪ ಸೂಚಿಸಿ 40 ದಿನಗಳ ಶೋಕಾಚರಣೆಯನ್ನು ಘೋಷಿಸಿದೆ. ಸಂತಾಪ ಸೂಚಕವಾಗಿ ಬಾವುಟಗಳನ್ನು ಅರ್ಧಕ್ಕೆ ಇಳಿಸಲಾಗುತ್ತದೆ. ಸಚಿವಾಲಯದ ಕಚೇರಿಗಳು, ಸರ್ಕಾರಿ ಇಲಾಖೆಗಳು, ಬ್ಯಾಂಕ್‌ಗಳು ಮತ್ತು ಸ್ಥಳೀಯ ಸಂಸ್ಥೆಗಳು ಶುಕ್ರವಾರದಿಂದ 40 ದಿನಗಳ ಕಾಲ ಸೇವೆ ಸ್ಥಗಿತ ಮಾಡಲಿವೆ. ಶೇಕ್‌ ನಿಧನಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಸಂತಾಪ ಸೂಚಿಸಿ ಟ್ವೀಟ್‌ ಮಾಡಿದ್ದಾರೆ.

Share Post