ಡಿಕೆಶಿ ಮತ್ತೆ ಜೈಲು ಸೇರುವ ದಿನ ದೂರವಿಲ್ಲ; ಸಚಿವ ಅಶ್ವತ್ಥನಾರಾಯಣ
ರಾಮನಗರ: ಡಿ.ಕೆ.ಶಿವಕುಮಾರ್ ಸದ್ಯ ಬೇಲ್ ಮೇಲೆ ಹೊರಗಿದ್ದಾರೆ. ಅವರು ಜಾಮೀನು ಪಡೆದು ಹೊರಬಂದಿರುವ ಜೈಲು ಹಕ್ಕಿ. ಅವರು ಮತ್ತೆ ಜೈಲು ಸೇರುವ ದಿನಗಳು ದೂರವಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಕೆಪಿಸಿಸಿ ಅಧ್ಯಕ್ಷರಿಗೆ ಟಾಂಗ್ ಕೊಟ್ಟಿದ್ರದಾರೆ. ರಾಮನಗರದಲ್ಲಿ ನಡೆದ ಉದ್ಯೋಗ ಮೇಳ ಉದ್ಘಾಟನೆ ವೇಳೆ ಅವರು ಮಾಧ್ಯಮಗಳ ಜೊತೆ ಮಾತನಾಡಿದರು.
ಶಿವಕುಮಾರ್ ನೂರು ಜನ್ಮ ಹುಟ್ಟಿ ಬಂದರೂ ನನ್ನ ಮುಖಕ್ಕೆ ಮಸಿ ಬಳಿಯಲು ಆಗದು. ಸದ್ಯ ಬಿಜೆಪಿಯಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ನಾನು ಆ ರೇಸ್ ನಲ್ಲೂ ಇಲ್ಲ. ಪಕ್ಷದಲ್ಲಿ ಯಾರೂ ನನಗೆ ವಿರೋಧಿಗಳಿಲ್ಲ. ಇದೆಲ್ಲ ವಿರೋಧ ಪಕ್ಷಗಳ ಕುತಂತ್ರ ಅಷ್ಟೇ ಎಂದರು.