Districts

ಲೋಕಾಯುಕ್ತಕ್ಕೆ ಮತ್ತೆ ಜೀವ ತುಂಬಲು ಸರ್ಕಾರ ಚಿಂತನೆ; ಸಚಿವ ಕಾರಜೋಳ

ಬಾಗಲಕೋಟೆ: ಲೋಕಾಯುಕ್ತ ಸಂಸ್ಥೆಗೆ ಮತ್ತೆ ಮರುಜೀವ ನೀಡಿ, ಅದನ್ನು ಬಲಪಡಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ. ಚುನಾವಣೆಗೆ ಮೊದಲೇ ಇದು ಕಾರ್ಯರೂಪಕ್ಕೆ ಬರಲಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು. ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಜೈಲಿಗೆ ಹೋಗಿ ಬೇಲ್ ಪಡೆದು ಹೊರಗಿರುವವರು, ರಾಜಕೀಯ ಹಗರಣಗಳ ಮು‌ಚ್ಚಿಹಾಕಲು ಲೋಕಾಯುಕ್ತ ಸಂಸ್ಥೆಯನ್ನು ಬುಡ ಸಮೇತ ನಾಶ ಮಾಡಿದವರು ಈಗ ಭ್ರಷ್ಟಾಚಾರದ ವಿಚಾರದಲ್ಲಿ ಬಿಜೆಪಿಗೆ ನೀತಿ ಪಾಠ ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ಭಾಗಿಯಾದ ಯಾರನ್ನೂ ಸರ್ಕಾರ ರಕ್ಷಿಸುವುದಿಲ್ಲ. ಕಾನ್‌ಸ್ಟೆಬಲ್‌ಗಳಿಂದ ಮೊದಲುಗೊಂಡು ಡಿವೈಎಸ್ಪಿ ಮಟ್ಟದ ಅಧಿಕಾರಿಗಳನ್ನು ಸಿಐಡಿ ಬಂಧಿಸಿರುವುದೇ ಇದಕ್ಕೆ ಸಾಕ್ಷಿ. ರಾಜ್ಯದಲ್ಲಿ ಈ ಹಿಂದೆ ಬೇರೆ ಬೇರೆ ಅಕ್ರಮಗಳು ನಡೆದಾಗ ಯಾವುದೇ ಸರ್ಕಾರಗಳು ಕೈಗೊಳ್ಳದ ಕ್ರಮವನ್ನು ಈ ವಿಚಾರದಲ್ಲಿ ನಾವು ಕೈಗೊಂಡಿದ್ದೇವೆ ಎಂದು ಗೋವಿಂದ ಕಾರಜೋಳ ಅವರು ಹೇಳಿದರು.

Share Post