ನಿನ್ನಿಂದಲೇ ಎಲ್ಲಾ ಆಗಿದ್ದು; ದಿವ್ಯಾ ಹಾಗರಗಿ ವಿರುದ್ಧ ಮಕ್ಕಳು ಗರಂ
ಕಲಬುರಗಿ: ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿಯನ್ನು ಅವರ ಮಕ್ಕಳು ಭೇಟಿ ಮಾಡಿದ್ದರು. ಈ ವೇಳೆ ತಾಯಿ ಜೆತೆ ಮುನಿಸಿಕೊಂಡಂತಿದ್ದಂ ಮಕ್ಕಳು, ನಿನ್ನಿಂದಲೇ ಎಲ್ಲಾ ಆಗಿದ್ದು. ಅಪ್ಪ ಕೂಡಾ ನಿನ್ನಿಂದಲೇ ಜೈಲಿಗೆ ಹೋಗುವಂತಾಯ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು ಎಂದು ಹೇಳಲಾಗಿದೆ. ಮಕ್ಕಳ ಈ ಮಾತನ್ನು ಕೇಳಿ ದಿವ್ಯಾ ಹಾಗರಗಿ ಕೂಡಾ ಕಣ್ಣೀರು ಹಾಕಿದ್ದಾರೆ.
ರಾಜೇಶ್ ಹಾಗರಗಿ ಹಾಗೂ ದಿವ್ಯಾ ಹಾಗರಗಿ ದಂಪತಿ ಬಂಧನದ ಬಳಿಕ ಅವರ ಮಕ್ಕಳನ್ನು ವಿಜಯಪುರದ ದಿವ್ಯಾ ಅವರ ತವರು ಮನೆಯಲ್ಲಿ ಇರಿಸಲಾಗಿತ್ತು. ದಿವ್ಯಾ ಅವರ ಸಹೋದರ ನಿನ್ನೆ ತಾಯಿಯ ಭೇಟಿಗಾಗಿ ಮಕ್ಕಳನ್ನು ಕರೆತಂದಿದ್ದರು. ಈ ಸಂದರ್ಭದಲ್ಲಿ ತಾಯಿ ದಿವ್ಯಾ ಅವರ ಬಗ್ಗೆ ಮುನಿಸಿಕೊಂಡ ಮಕ್ಕಳು, ನಿನ್ನಿಂದಲೇ ಎಲ್ಲಾ ಆಗಿದ್ದು, ಅಪ್ಪ ಜೈಲಿಗೆ ಹೋಗುವಂತಾಯಿತು. ಎಲ್ಲವನ್ನೂ ಟಿ.ವಿ.ಯಲ್ಲಿ ನೋಡಿದ್ದೇವೆ ಎನ್ನುವುದನ್ನು ಕೇಳಿ ಮತ್ತೆ ದಿವ್ಯಾ ಹಾಗರಗಿ ಕಣ್ಣೀರು ಹಾಕಿದರು.