ಹುತಾತ್ಮರ ಮಕ್ಕಳಿಗೆ 1 ಲಕ್ಷ ಉಚಿತ ಟ್ಯಾಬ್ಲೆಟ್‌ಗಳ ವಿತರಣೆ
ಹೈದರಾಬಾದ್; ಹೈದರಾಬಾದ್‌ನಲ್ಲಿ ಮೂರು ದಿನಗಳ ರೋಟರಿ ಪ್ರೆಸಿಡೆನ್ಸಿಯಲ್ ಕಾನ್ಫರೆನ್ಸ್ ನಡೆಯುತ್ತಿದೆ. ಇದರಲ್ಲಿ ಹುತಾತ್ಮ ಯೋಧರ ಮಕ್ಕಳಿಗೆ ಒಂದು ಲಕ್ಷ ಟ್ಯಾಬ್ಲೆಟ್‌ಗಳ ವಿತರಣೆ ಒಪ್ಪಂದಕ್ಕೆ ಫಸ್ಟ್ ಇನ್ ಕ್ಲಾಸ್ ಎಜುಟೆಕ್ ಫ್ಲಾಟ್‌ಫಾರ್ಮ್ ಹಾಗೂ ರೋಟರಿ ಇಂಡಿಯಾ ಸಹಿ ಹಾಕಿದವು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಐಟಿವಿ ಪ್ರೈವೇಟ್ ಲಿಮಿಟೆಡ್ ಮುಖ್ಯಸ್ಥರಾದ ಕಾರ್ತಿಕೇಯ ಶರ್ಮಾ ಅವರು, ರೋಟರಿ ಸಂಸ್ಥೆಯ ಸಹಭಾಗಿತ್ವದಲ್ಲಿ ದೇಶಾದ್ಯಂತ ಹುತಾತ್ಮರ ಮಕ್ಕಳಿಗೆ ಉಚಿತವಾಗಿ ಒಂದು ಲಕ್ಷ ಟ್ಯಾಬ್ಲೆಟ್ ವಿತರಣೆ ಮಾಡುತ್ತಿದ್ದೇವೆ. ಇದು ನಮ್ಮ ಸಂಸ್ಥೆಗೆ ಹೆಮ್ಮೆಯ ವಿಚಾರ ಎಂದು ಹೇಳಿದರು. ಬಡ ಹಾಗೂ ಹುತಾತ್ಮರ ಮಕ್ಕಳಿಗೆ ಉತ್ತಮ ಗುಣಮಟ್ಟದ ಮತ್ತು ಆಧುನಿಕ ಶಿಕ್ಷಣ ಒದಗಿಸುವುದು ನಮ್ಮ ಉದ್ದೇಶ ಎಂದು ಹೇಳಿದರು.
ಈ ಕಾರ್ಯಕ್ರಮ ನಿನ್ನೆಯಿಂದ ಶುರುವಾಗಿದ್ದು, ನಾಳೆ ಸಂಜೆ ಅಂತ್ಯವಾಗಲಿದೆ.