Cinema

ಮೆಗಾಸ್ಟಾರ್‌ ಚಿರಂಜೀವಿ ಮುಂದೆ ನಾಚಿ ನೀರಾದ ಪೂಜಾ ಹೆಗ್ಡೆ

ಹೈದರಾಬಾದ್‌: ಟಾಲಿವುಡ್‌ ಮೆಗಾಸ್ಟಾರ್‌ ಚಿರಂಜೀವಿ ಹಾಗೂ ಅವರ ಪುತ್ರ ರಾಮ್‌ ಚರಣ್‌ ನಟಿಸಿರುವ ಆಚಾರ್ಯ ಸಿನಿಮಾ ರಿಲೀಸ್‌ಗೆ ಇನ್ನೆರಡು ದಿನ ಮಾತ್ರ ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಚಿತ್ರದ ಪ್ರೀ ರಿಲೀಸ್‌ ಇವೆಂಟ್‌ ನಡೆಯಿತು. ಈ ವೇಳೆ ಮಾಧ್ಯಮಗಳು ಫೋಟೋ ಕ್ಲಿಕ್ಕಿಸಿಕೊಳ್ಳುವಾಗ ಚಿರಂಜೀವಿ ಜೊತೆ ನಿಂತ ಪೂಜಾ ಹೆಗ್ಡೆ ನಾಚಿ ನೀರಾಗಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್‌ ಆಗುತ್ತಿದೆ.

 

ಆಚಾರ್ಯ ಚಿತ್ರ ತಂಡದ ಭರ್ಜರ ಪ್ರಮೋಷನ್‌ ಮಾಡ್ತಿದೆ. ಇತ್ತೀಚೆಗೆ ಪ್ರಿ ರಿಲೀಸ್‌ ಇವೆಂಟ್‌ ಕೂಡಾ ಅದ್ದೂರಿಯಾಗಿ ನಡೆಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಾಧ್ಯಮಗಳ ಕ್ಯಾಮೆರಾ ಕಣ್ಣಿಗೆ ರಾಮ್‌ಚರಣ್, ಚಿರಂಜೀವಿ, ಪೂಜಾ ಹೆಗ್ಡೆ ಸಿಕ್ಕಿದ್ದಾರೆ.  ಪೂಜಾ ಹೆಗ್ಡೆ ಜೊತೆ ಚಿರಂಜೀವಿ ಫೋಟೋ ಬೇಕೆಂದು ಮಾಧ್ಯಮ ಪ್ರತಿನಿಧಿಗಳು ಕೇಳಿದ್ದಾರೆ. ಈ ವೇಳೆ ಚಿರಂಜೀವಿ ಪೂಜಾ ಹೆಗ್ಡೆರನ್ನು ಕರೆದು ಕ್ಯಾಮರಾಗೆ ಫೋಸ್‌ ಕೊಟ್ಟಿದ್ದಾರೆ. ಈ ವೇಳೆ ಪೂಜಾ ಹೆಗ್ಡೆ ನಾಚಿ ನೀರಾಗಿದ್ದಾರೆ.

 

Share Post