Bengaluru

ಮೊದಲ ದಿನವೇ 150 ಕೋಟಿ ರೂಪಾಯಿ ಬಾಚಿದ ಕೆಜಿಎಫ್‌-2

ಬೆಂಗಳೂರು; ಯಶ್‌ ನಟನೆಯ ಪ್ಯಾನ್‌ ಇಂಡಿಯಾ ಸಿನಿಮಾ ಕೆ.ಜಿ.ಎಫ್‌–2 ಮೊದಲ ದಿನವೇ ಭರ್ಜರಿ ಕಲೆಕ್ಷನ್‌ ಮಾಡಿದ್ದು, ಬಾಕ್ಸಾಫೀಸು ಕೊಳ್ಳೆ ಹೊಡೆದಿದೆ. ಭಾರತದಲ್ಲಿ ಕೆ.ಜಿ.ಎಫ್‌–2 ಮೊದಲ ದಿನದ ಒಟ್ಟು ಗಳಿಕೆ 134.5 ಕೋಟಿ ರೂಪಾಯಿ ದಾಟಿದೆ ಎಂದು ಹೊಂಬಾಳೆ ಫಿಲ್ಮ್ಸ್‌ ತನ್ನ ಟ್ವಿಟರ್‌ ಖಾತೆಯಲ್ಲಿ ಅಧಿಕೃತವಾಗಿ ತಿಳಿಸಿದೆ.

ಸಿನಿಮಾದಲ್ಲಿ ಬರುವ ಡೈಲಾಗ್‌, ‘ದಿಸ್‌ ಈಸ್‌ ದಿ ಬಿಗ್ಗೆಸ್ಟ್‌ ನ್ಯಾಷನಲ್‌ ಇಷ್ಯು ನೌ’ ಉಲ್ಲೇಖಿಸಿ ಹೊಂಬಾಳೆ ಫಿಲ್ಮ್ಸ್‌ ಟ್ವೀಟ್‌ ಮಾಡಿದೆ. ಹೀಗೆ, ನಿರೀಕ್ಷೆಯಂತೆ ಮೊದಲ ದಿನವೇ ಕೆ.ಜಿ.ಎಫ್‌–2 ನೂರು ಕೋಟಿ ಕ್ಲಬ್‌ ಸೇರಿದೆ. ಅಮೆರಿಕದಲ್ಲಿ ಮೊದಲ ದಿನದ ಕಲೆಕ್ಷನ್‌ 8 ಕೋಟಿ ರೂಪಾಯಿ ದಾಟಿದೆಯಂತೆ. ಒಟ್ಟಾರೆ ಮೊದಲ ದಿನದ ಒಟ್ಟು ಗಳಿಕೆ 150 ಕೋಟಿ ದಾಟಿದೆ ಎಂದು ಹೇಳಲಾಗಿದೆ.

Share Post