ಚಂದ್ರು ಕೊಲೆ ಪ್ರಕರಣ; ಪೊಲೀಸರು ಹೇಳಿದ್ದು ಸುಳ್ಳು – ಪರಿಷತ್ ಸದಸ್ಯ ರವಿಕುಮಾರ್
ಬೆಂಗಳೂರು: ಗೋರಿಪಾಳ್ಯದ ಚಂದ್ರು ಕೊಲೆಯ ಪ್ರಕರಣದಲ್ಲಿ ಪೊಲೀಸ್ ಕಮಿಷನರ್ ಹೇಳಿರುವುದು ಸುಳ್ಳು. ಗೃಹ ಸಚಿವರು ಹೇಳಿರುವುದು ಸತ್ಯ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿ ಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೊಲೆ ನಡೆದ ಜಾಗದಲ್ಲಿ ಸ್ಥಳೀಯರಿದ್ದರು. ಚಂದ್ರು ಸ್ನೇಹಿತ ಸೈಮನ್ ಕೂಡಾ ಜೊತೆಯಲ್ಲಿದ್ದ. ಉರ್ದು ಬರಲ್ಲ ಎಂದು ಹೇಳಿದಾಗ ಚುಚ್ಚಿದ್ದಾರೆ ಎಂದು ಸೈಮನ್ ಹೇಳಿದ್ದಾನೆ. ಆದ್ರೆ ಪೊಲೀಸ್ ಕಮಿಷನರ್ ಸುಳ್ಳು ಹೇಳಿದ್ದಾರೆ. ಈ ಬಗ್ಗೆ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಚಂದ್ರು ಅವರನ್ನು ಹತ್ಯೆ ಮಾಡಿರುವುದು ಗೂಂಡಾ ಮುಸ್ಲಿಮರು. ಚಾಕುವಿನಿಂದ ಚುಚ್ಚಿ ಚುಚ್ಚಿ ಕೊಲೆ ಮಾಡಿದ್ದಾರೆ ಎಂದು ಸೈಮನ್ ಹೇಳಿದ್ದಾರೆ. ಬೈಕ್ಗೆ ಅಪಘಾತ ಆಗಿದ್ದು ನಿಜ. ಆಗ ಉರ್ದುವಿನಲ್ಲಿ ಮಾತನಾಡಿ ಎಂದು ಹೇಳಿದ್ದಾರೆ. ಉರ್ದು ಬರುವುದಿಲ್ಲ ಎಂದಾಗ ಕೊಲೆ ಮಾಡಿದ್ದಾರೆ. ರಕ್ತಸ್ರಾವದಿಂದ ಚಂದ್ರು ಸಾವನ್ನಪ್ಪಿದ್ದಾರೆ ಎಂದು ರವಿ ಕುಮಾರ್ ಹೇಳಿದರು.