ಟೇಕಾಫ್ ಆಗುತ್ತಿದ್ದಂತೆ ವಿಮಾನದಲ್ಲಿ ತಾಂತ್ರಿಕ ದೋಷ; ತುರ್ತು ಭೂಸ್ಪರ್ಶ
ನಾಗ್ಪುರ: ತಾಂತ್ರಿಕ ದೋಷವುಂಟಾಗಿ ಇಂಡಿಗೋ ವಿಮಾನವೊಂದು ಮಹಾರಾಷ್ಟ್ರದ ನಾಗ್ಪುರ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿರುವ ಘಟನೆ ನಡೆದಿದೆ. ಪೈಲಟ್ ಸುರಕ್ಷಿತವಾಗಿ ವಿಮಾನವನ್ನು ಕೆಳಗಿಳಿಸಿದ್ದು, ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.
ಇಂಡಿಗೋ ವಿಮಾನ ನಾಗ್ಪುರದಿಂದ ಉತ್ತರ ಪ್ರದೇಶದ ಲಖನೌ ಹೋಗಬೇಕಿತ್ತು. ಟೇಕಾಫ್ ಆಗುತ್ತಿದ್ದಂತೆ, ತಾಂತ್ರಿಕ ಸಮಸ್ಯೆ ಉಂಟಾಗಿದೆ. ಹೀಗಾಗಿ ಪೈಲಟ್ ವಾಪಸ್ ನಾಗಪುರ ನಿಲ್ದಾಣದಲ್ಲೇ ಲ್ಯಾಂಡ್ ಮಾಡಿದ್ದಾರೆ. ಇತ್ತ, ಈ ಘಟನೆಯ ಬಗ್ಗೆ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯವು ತನಿಖೆಗೆ ಆದೇಶಿಸಿದೆ. ನಾಗ್ಪುರ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ ಮಾಡಿದ ನಂತರ ವಿಮಾನದಿಂದ ಹೊಗೆ ಹೊರ ಬಂದಿದೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.