Bengaluru

110 ದಾಟಿದ ಪೆಟ್ರೋಲ್‌ ಬೆಲೆ; ಕೆಲವೆಡೆ ಶತಕ ಬಾರಿಸಿದ ಡೀಸೆಲ್‌

ಬೆಂಗಳೂರು: ಇವತ್ತೂ ಕೂಡಾ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಯಾಗಿದೆ. ಇದರಿಂದಾಗಿ ಬೆಂಗಳೂರಿನಲ್ಲಿ ಒಂದು ಲೀಟರ್‌ ಪೆಟ್ರೋಲ್‌ ಬೆಲೆ 110.25 ರೂಪಾಯಿ ಆಗಿದೆ. ಇಂದು ಬೆಂಗಳೂರಿನಲ್ಲಿ ಪೆಟ್ರೋಲ್‌ ಬೆಲೆ 84 ಪೈಸೆ ಹೆಚ್ಚಾಗಿದೆ. ಇನ್ನು ಡೀಸೆಲ್‌ ದರ ಲೀಟರ್‌ಗೆ 78 ಪೈಸೆ ಹೆಚ್ಚಾಗಿದ್ದು, ಡೀಸೆಲ್‌ ಲೀಟರ್‌ಗೆ 94.01 ರೂಪಾಯಿ ಆಗಿದೆ. ಇನ್ನು ಮುಂಬೈ ಸೇರಿ ಕೆಲ ನಗರಗಳಲ್ಲಿ ಡೀಸೆಲ್‌ ಕೂಡಾ ಶತಕ ಬಾರಿಸಿದೆ.

ಮುಂಬೈನಲ್ಲಿ ಲೀಟರ್‌ ಪೆಟ್ರೋಲ್‌ಗೆ 119.67 ರೂಪಾಯಿ ಇದ್ದರೆ, ಡೀಸೆಲ್‌ ಬೆಲೆ 103.92 ರೂಪಾಯಿ ಇದೆ. ಹೈದರಾಬಾದ್‌, ಪಾಟ್ನಾ, ಭುವನೇಶ್ವರ, ತಿರುವಂತಪುರಂ, ಮುಂಬೈ, ರಾಯ್‌ಪುರ್‌ ಹಾಗೂ ರಾಜಸ್ಥಾನ, ಮಧ್ಯ ಪ್ರದೇಶ, ತೆಲಂಗಾಣ ರಾಜ್ಯಗಳ ಹಲವು ನಗರಗಳಲ್ಲಿ ಪ್ರತಿ ಲೀಟರ್‌ ಡೀಸೆಲ್‌ ದರ 100ರ ಗಡಿ ದಾಟಿದೆ. ಆಂಧ್ರ ಪ್ರದೇಶದ ಚಿತ್ತೂರ್‌ನಲ್ಲಿ ಪ್ರತಿ ಲೀಟರ್‌ ಡೀಸೆಲ್‌ ದರ ದೇಶದಲ್ಲೇ ದುಬಾರಿ ಅಂದರೆ 105.52 ರೂಪಾಯಿ ಆಗಿದೆ.

Share Post