National

ಮೇಕೆಗೆ ತಾಳಿ ಕಟ್ಟಿದ ಯುವಕ; ಆಂಧ್ರದಲ್ಲಿ ಇದೆಂಥಾ ಮದುವೆ..?

ಕೃಷ್ಣಾ: ದೋಷ ನಿವಾರಣೆಗೆಂದು ಗಿಡದ ಜೊತೆ ಮದುವೆಯಾಗುವುದು, ನಾಯಿ ಜೊತೆ ಮದುವೆಯಾಗುವುದು ಮುಂತಾದವುಗಳನ್ನು ನಾವು ನೋಡಿದ್ದೇವೆ. ಆಂಧ್ರಪ್ರದೇಶದಲ್ಲಿ ಇಂತಹದ್ದೇ ಒಂದು ವಿಚಿತ್ರ ಮದುವೆ ನಡೆದಿದೆ. ಯುವಕನೊಬ್ಬ ಮೇಕೆಯೊಂದಿಗೆ ಮದುವೆಯಾಗಿ ಕುತೂಹಲಕ್ಕೆ ಕಾರಣವಾಗಿದ್ದಾನೆ. ಕೃಷ್ಣಾ ಜಿಲ್ಲೆಯ ನೂಜಿವೀಡು ಎಂಬಲ್ಲಿ ಇಂತಹದ್ದೊಂದು ಘಟನೆ ನಡೆದಿದೆ.

     ನೂಜಿವೀಡಿನ ಯುವಕನೊಬ್ಬ ಮದುವೆಯಾಗಲು ಹುಡುಗಿ ಹುಡುಕುತ್ತಿದ್ದ. ಇದೇ ವೇಳೆ ಜ್ಯೋತಿಷಿಯೊಬ್ಬರಿಗೆ ತನ್ನ ಜಾತಕವನ್ನು ತೋರಿಸಿದ್ದಾರೆ. ಆಗ ಆತ, ನಿನ್ನ ಜಾತಕದಲ್ಲಿ ಎರಡು ಮದುವೆ ಅಂತ ಇದೆ. ಹೀಗಾಗಿ, ನೀನು ಮೊದಲು ಮೇಕೆಯೊಂದಿಗೆ ಮದುವೆಯಾಗಿ ದೋಷ ನಿವಾರಣೆ ಮಾಡಿಕೋ ಎಂದು ಹೇಳಿದ್ದಾರೆ.

ಜ್ಯೋತಿಷಿಯ ಮಾತು ನಂಬಿದ ಯುವಕ ಮೇಕೆಯೊಂದಿಗೆ ವಿವಾಹವಾಗಿದ್ದಾನೆ. ಈ ಮೂಲಕ ಜನರ ತಮಾಷೆಗೆ ಗುರಿಯಾಗಿದ್ದಾನೆ.

Share Post