ಬೀಟ್ರೂಟ್ ಜ್ಯೂಸ್ ತೂಕ ಕಡಿಮೆ ಮಾಡಲು ಸಹಾಯಕಾರಿ ಹಾಗೂ ಲಿವರ್ ರಕ್ಷಣೆಗೆ ರಾಮಬಾಣ
ಬೀಟ್ರೂಟ್ ಜ್ಯೂಸ್ ದೇಹದಲ್ಲಿ ರಕ್ತ ಪರಿಚಲನೆಗೆ ಸಹಾಯ ಮಾಡುವುದರ ಜೊತೆಗೆ ಅನೇಕ ಕಾಯಿಲೆಗಳಿಂದ ದೂರರವಿರಿಸುತ್ತದೆ. ಬೀಟ್ರೂಟ್ ರಸವು ಆಂಟಿಆಕ್ಸಿಡೆಂಟ್, ವಿಟಮಿನ್ ಎ, ವಿಟಮಿನ್ ಬಿ 6, ಕಬ್ಬಿಣದ ಜೊತೆಗೆ ಪ್ರೋಟೀನ್ಗಳು, ಕಾರ್ಬೋಹೈಡ್ರೇಟ್ಗಳು, ಫೈಬರ್, ಫೋಲೇಟ್, ವಿಟಮಿನ್ ಸಿ, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಮ್ಯಾಂಗನೀಸ್ ಮತ್ತು ಸತುವುಗಳನ್ನು ಒಳಗೊಂಡಿದೆ. ಇದು ದೇಹದಿಂದ ವಿಷಕಾರಿ ತ್ಯಾಜ್ಯವನ್ನು ಹೊರಹಾಕುವ ಆಂಟಿಆಕ್ಸಿಡೆಂಟ್ಗಳನ್ನು ಹೊಂದಿರುತ್ತದೆ.
ಬೀಟ್ರೂಟ್ ಜ್ಯೂಸ್ನಲ್ಲಿ ಕ್ಯಾಲೋರಿಗಳು ಕಡಿಮೆ ಮತ್ತು ಕೊಬ್ಬು ಕಡಿಮೆ. ತೂಕ ಇಳಿಸಿಕೊಳ್ಳಲು ಬಯಸುವವರು ಇದನ್ನು ಪ್ರತಿದಿನ ಸೇವಿಸಬಹುದು. ಬೀಟ್ರೂಟ್ನಲ್ಲಿರುವ ಆಂಟಿಆಕ್ಸಿಡೆಂಟ್ ಬೀಟೈನ್ ಯಕೃತ್ತಿನಲ್ಲಿ ಕೊಬ್ಬಿನ ನಿಕ್ಷೇಪವನ್ನು ತಡೆಯಲು ಅಥವಾ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಬೀಟ್ರೂಟ್ನಲ್ಲಿರುವ ಫೈಟೊನ್ಯೂಟ್ರಿಯೆಂಟ್ಗಳು ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆಲ್ಕೋಹಾಲ್ ಹಾನಿಯಿಂದ ಲಿವರ್ ಅನ್ನು ರಕ್ಷಿಸಲು ಬೀಟ್ರೂಟ್ ರಸವು ಉತ್ತಮವಾಗಿದೆ. ಲಿವರ್ ಸರಿಯಾಗಿ ಕೆಲಸ ಮಾಡಲು ಮತ್ತು ಚೈತನ್ಯಗೊಳಿಸಲು ಬೀಟ್ರೂಟ್ ಜ್ಯೂಸ್ ಕುಡಿಯುವುದು ಒಳ್ಳೆಯದು.
ಬೀಟ್ರೂಟ್ ರಸದಲ್ಲಿ ನೈಟ್ರೇಟ್ ಸಮೃದ್ಧವಾಗಿದೆ. ವಯಸ್ಸಾದವರಲ್ಲಿ ಮೆದುಳಿಗೆ ರಕ್ತದ ಹರಿವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಪ್ರತಿದಿನ ಬೀಟ್ರೂಟ್ ರಸವನ್ನು ಕುಡಿಯುವುದರಿಂದ ಪೊಟ್ಯಾಸಿಯಮ್ ಮಟ್ಟವನ್ನು ಸ್ಥಿರವಾಗಿಡಲು ಸಹಾಯ ಮಾಡುತ್ತದೆ. ತೀವ್ರವಾದ ಬಿಸಿಲು ಮತ್ತು ಇತರ ಮಾಲಿನ್ಯಕಾರಕಗಳಿಂದ ಚರ್ಮವನ್ನು ರಕ್ಷಿಸುವುದು ಬಹಳ ಮುಖ್ಯ. ಬೀಟ್ರೂಟ್ ರಸವು ಚರ್ಮವನ್ನು ಒಳಗಿನಿಂದ ರಕ್ಷಿಸುತ್ತದೆ. ಈ ಜ್ಯೂಸ್ನಲ್ಲಿರುವ ಲೈಕೋಪಿನ್ ನಮ್ಮ ಚರ್ಮವನ್ನು ಸುಡುವ ಬಿಸಿಲಿನಿಂದ ರಕ್ಷಿಸುತ್ತದೆ. ಆರೋಗ್ಯಕರ ಲೈಂಗಿಕ ಬಯಕೆಯನ್ನು ಹೆಚ್ಚಿಸಲು ಈ ರಸವು ಅದ್ಭುತವಾಗಿ ಕೆಲಸ ಮಾಡುತ್ತದೆ ಎಂದು ಸಂಶೋಧನೆ ತೋರಿಸಿದೆ.