ಹಿಂದೂ ಎಂಬ ಪದದಿಂದ ದೇಶದಲ್ಲಿ ಅಪಾಯ ಸೃಷ್ಟಿಯಾಗುತ್ತಿದೆ; ಸಾಹಿತಿ ಕುಂ.ವೀರಭದ್ರಪ್ಪ
ಬೆಂಗಳೂರು: ಹಿಂದೂ ಎಂಬ ಪದದಿಂದಲೇ ದೇಶದಲ್ಲಿ ಅಪಾಯ ಸೃಷ್ಟಿಯಾಗುತ್ತಿದೆ. ಹೀಗಾಗಿ ನಾನು ಹಿಂದೂ ಅಲ್ಲ ಅಂತ ಘೋಷಿಸುತ್ತಿದ್ದೇನೆ ಎಂದು ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ಹೇಳಿದ್ದಾರೆ. ಗಾಂಧಿಭವನದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ನಾನು ಲಿಂಗಾಯತ, ಬಸವಣ್ಣನ ಅನುಯಾಯಿ, ಆದ್ರೆ ನಾನು ಹಿಂದೂ ಅಲ್ಲ ಎಂದು ಹೇಳಿದರು.
ದೇಶದಲ್ಲಿ 20 ಕೋಟಿ ಮುಸ್ಲಿಮರು, ಸಿಖ್ಖರು, ಕ್ರಿಶ್ಚಿಯನ್ನರು, ಜೈನರು ಎಲ್ಲರೂ ಇದ್ದಾರೆ. ಹೀಗಾಗಿ ದೇಶ ಸರ್ವಜನಾಂಗದ ಶಾಂತಿಯ ತೋಟವಾಗಬೇಕು. ಆದ್ರೆ, ಈಗ ಹಿಂದೂ ಎಂಬ ಪದದಿಂದಲೇ ದೇಶದಲ್ಲಿ ಅಪಾಯ ಸೃಷ್ಟಿ ಆಗುತ್ತಿದೆ. ಹಿಂದೂ ಎಂಬುದು ಕೇವಲ ಪದ ಅಷ್ಟೇ. ಹಿಂದೂಗಳು ಬಹುಸಂಖ್ಯಾತರು ಎನ್ನೋದು ಸರಿಯಲ್ಲ. ಅದು ಇಂಪಾರ್ಟಂಟ್ ಅಲ್ಲ ಎಂದರು. ಮುಸ್ಲಿಮರು ವ್ಯವಹರ ಮಾಡಬಾರದು ಎಂದರೆ ಅವರು ಎಲ್ಲಿಗೆ ಹೋಗಬೇಕು..? ಎಂದು ಅವರು ಇದೇ ವೇಳೆ ಪ್ರಶ್ನೆ ಮಾಡಿದರು.