ಬೆಲೆ ಏರಿಕೆ ಖಂಡಿಸಿ ದೇಶಾದ್ಯಂತ ಕಾಂಗ್ರೆಸ್ ಧರಣಿ: ಸಿಲಿಂಡರ್, ಬೈಕ್‌ಗೆ ಹೂವಿನ ಹಾರ ಹಾಕಿ ಪ್ರತಿಭಟನೆ
ದೆಹಲಿ: ಕೇಂದ್ರ ಸರ್ಕಾರ ಬೆಲೆ ಏರಿಕೆ ನೀತಿ ವಿರುದ್ಧ ಕಾಂಗ್ರೆಸ್ ನಾಯಕರು ತಿರುಗಿಬಿದ್ದಿದ್ದಾರೆ. ದೇಶಾದ್ಯಂತ ಪ್ರತಿಭಟನೆಗೆ ಕಾಂಗ್ರೆಸ್ ಕರೆ ಕೊಟ್ಟಿದೆ. ಅದರಂತೆ ಇಂದು ರಾಹುಲ್ ಗಾಂದಿ ನೇತೃತ್ವದಲ್ಲಿ ದೆಹಲಿಯ ವಿಜಯ್ ಚೌಕ್‌ನಲ್ಲಿ ಕಾಂಗ್ರೆಸ್ ನಾಯಕರು ಧರಣಿ ನಡೆಸಿದ್ರು.
ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಲೋಕಸಭೆ ಮತ್ತು ರಾಜ್ಯಸಭೆಯ ಭಿತ್ತಿ ಪತ್ರಗಳನ್ನು ಹಿಡಿದು ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದ್ರು. ಧರಣಿಯಲ್ಲಿ ಅಧೀರ್ ರಂಜನ್ ಚೌಧರಿ, ಮಲ್ಲಿಕಾರ್ಜುನ್ ಖರ್ಗೆ ಸೇರಿದಂತೆ ಹಿರಿಯ ನಾಯಕರು ಭಾಗವಹಿಸಿದ್ರು.
भाजपा सरकार ने पिछले 10 दिन में 9 बार पेट्रोल-डीज़ल के दाम बढ़ाए गए हैं। इसकी चोट सीधे तौर पर गरीब, मिडिल क्लास पर पड़ती है।
हमारी माँग है कि भाजपा सरकार बढ़ रहे दामों और महंगाई को नियंत्रित करे: श्री @RahulGandhi #महँगाई_मुक्त_भारत pic.twitter.com/pt4wK3VKgl
— All India Mahila Congress (@MahilaCongress) March 31, 2022
ಕೆಪಿಸಿಸಿ ಕಚೇರಿ ಬಳಿ ಡಿಕೆಶಿ ನೇತೃತ್ವದಲ್ಲಿ ಧರಣಿ
ಬೆಂಗಳೂರು: ಇತ್ತ ಬೆಂಗಳೂರಿನಲ್ಲಿಯೂ ಕೆಪಿಸಿಸಿ ಕಚೇರಿ ಬಳಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಬೈಕ್, ಸಿಲಿಂಡರ್‌ಗಳಿಗೆ ಹೂವಿನ ಹಾರ ಹಾಕಿ, ಗಂಟೆ ಬಾರಿಸಿ ಬೆಲೆ ಏರಿಕೆ ವಿರುದ್ಧ ಧರಣಿ ನಡೆಸಿದ್ದಾರೆ. ಈ ವೇಳೆ ಕಾಂಗ್ರೆಸ್ ಶಾಸಕರು, ಕಾರ್ಯಕರ್ತರು ಭಾಗವಹಿಸಿದ್ರು. ಇಂದು ದೇಶಾದ್ಯಂತ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಧರಣಿ ನಡೆಸಲು ತೀರ್ಮಾನ ಮಾಡಿದೆ.