PETROL_DIESEL PRICE HIKE: ನಿತ್ಯ 70-80ಪೈಸೆ ಹೆಚ್ಚಳ- 9 ದಿನದಲ್ಲಿ 5.6 ರೂಪಾಯಿ ಏರಿಕೆ
ನವದೆಹಲಿ: ಪೆಟ್ರೋಲ್, ಡೀಸೆಲ್ ಬೆಲೆಯನ್ನು ಒಮ್ಮೆಗೆ ಏರಿಸದೇ ನಿತ್ಯವೂ ಕೊಂಚ ಕೊಂಚ ಏರಿಸಲಾಗುತ್ತಿದೆ. ಕಳೆದ ಒಂಬತ್ತು ದಿನಗಳಲ್ಲಿ ಎಂಟು ಬಾರಿ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಏರಿಕೆ ಮಾಡಲಾಗಿದೆ. ಇಂದು ಡೀಸೆಲ್ ಹಾಗೂ ಪೆಟ್ರೋಲ್ ಬೆಲೆಯನ್ನು 80 ಪೈಸೆ ಏರಿಕೆ ಮಾಡಲಾಗಿದೆ. ಇದರಿಂದಾಗಿ ಒಂಬತ್ತು ದಿನದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 5 ರೂಪಾಯಿ 60 ಪೈಸೆ ಏರಿಕೆಯಾದಂತಾಗಿದೆ.
ಮಾರ್ಚ್ 22 ರಿಂದ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಲಾಗುತ್ತಿದ್ದು, ಒಂಬತ್ತು ದಿನದಲ್ಲಿ ಒಂದು ದಿನ ಮಾತ್ರ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿಲ್ಲ. ಉಳಿದ ಎಂಟು ದಿನಗಳಲ್ಲಿ ಪ್ರತಿ ನಿತ್ಯ 70 ರಿಂದ 80 ಪೈಸೆ ಏರಿಕೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಇಂದು 30 ಪೈಸೆಯಷ್ಟು ಏರಿಕೆ ಕಂಡಿದೆ. ನಿನ್ನೆ ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್‌ಗೆ 105.62 ಪೈಸೆ ಇತ್ತು. ಇವತ್ತು ಲೀಟರ್ ಪೆಟ್ರೋಲ್ ಬೆಲೆ 105.94 ಪೈಸೆಯಷ್ಟಾಗಿದೆ.