Bengaluru

ಜಿಮ್‌ನಲ್ಲಿ ವರ್ಕೌಟ್‌ ಮಾಡುತ್ತಲೇ ಕುಸಿದುಬಿದ್ದ ಮಹಿಳೆ; ಕ್ಷಣಾರ್ಧದಲ್ಲೇ ಸಾವು

ಬೆಂಗಳೂರು: ಜಿಮ್‌ನಲ್ಲಿ ವರ್ಕೌಟ್‌ ಮಾಡುತ್ತಿರುವಾಗಲೇ ಕುಸಿದುಬಿದ್ದು ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಎಲ್ಲೆಡೆ ವೈರಲ್‌ ಆಗಿದೆ.

    ಮಲ್ಲೇಶಪಾಳ್ಯದ ಜಿಮ್​ವೊಂದರಲ್ಲಿ ಈ ಘಟನೆ ನಡೆದಿದೆ.  ವಿನಯ ಕುಮಾರಿ (44) ಎಂಬಾಕೆಯೇ ಜಿಮ್‌ ಮಾಡುವಾಗ ಕುಸಿದುಬಿದ್ದು ಮೃತಪಟ್ಟ ಮಹಿಳೆ.  ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ವಿನಯಕುಮಾರಿ, ಶುಕ್ರವಾರ ರಾತ್ರಿ ಪಾಳಿಯಲ್ಲಿ ಕೆಲಸ ಮುಗಿಸಿ ಮನೆಗೆ ಬಂದಿದ್ದರು. ಅನಂತರ ಜಿಮ್‌ಗೆ ಬಂದಿದ್ದರು. ವರ್ಕೌಟ್‌ ಮಾಡುವಾಗ ಆಕೆ ಏಕಾಏಕಿ ಕುಸಿದುಬಿದ್ದಿದ್ದಾರೆ. ಬೆಳಗ್ಗೆ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.

Share Post