Bengaluru

ಹೆಚ್‌ಎಎಲ್‌ನಲ್ಲಿ ಬೊಮ್ಮಾಯಿ, ಪ್ರಮೋದ್‌ ಸಾವಂತ್‌ ಭೇಟಿ: ಯೋಗಿ ಆದಿತ್ಯಾನಾಥ್‌ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗಿ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ಭೇಟಿ ಮಾಡಿ ಪರಸ್ಪರ ಶುಭ ಕೋರಿದರು. ಇಂದು ಉತ್ತರಪ್ರದೇಶ ರಾಜ್ಯದ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಎರಡನೇ ಬಾರಿಗೆ ಪ್ರಮಾಣವಚನ‌ ಸ್ವೀಕಾರ ಹಿನ್ನೆಲೆ, ಸಮಾರಂಭದಲ್ಲಿ ಭಾಗವಹಿಸಲು ಇಬ್ಬರೂ  ಮುಖ್ಯಮಂತ್ರಿಗಳು ಜೊತೆಯಾಗಿ ವಿಶೇಷ ವಿಮಾನದ ಮೂಲಕ ಲಕ್ನೋಗೆ ತೆರಳಿದರು. ಸಿಎಂ ಬೊಮ್ಮಾಯಿಯವರಿಗೆ ಶಿಕ್ಷಣ ಸಚಿವ ಬಿ ಸಿ ನಾಗೇಶ್‌ ಸಾಥ್‌ ನೀಡಿದ್ರು.

ಇದೇ ತಿಂಗಳ ಮಾರ್ಚ್‌ 28ರಂದು ಗೋವಾ ಮುಖ್ಯಮಂತ್ರಿಯಾಗಿ ಎರಡನೇ ಬಾರಿಗೆ ಪ್ರಮೋಸ್‌ ಸಾವಂತ್‌ ಕೂಡ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಈಗಾಗಲೇ 25 ಶಾಸಕರ ಬೆಂಬಲದ ಪತ್ರವನ್ನು ಗೋವಾ ರಾಜ್ಯಪಾಲ ಪಿ.ಎಸ್. ಶ್ರೀಧರನ್ ಪಿಳ್ಳೈ ಅವರಿಗೆ ಸಲ್ಲಿಕೆ ಮಾಡಿದ್ದು, ಗೋವಾದಲ್ಲಿ ಮುಂದಿನ ಸರ್ಕಾರ ರಚಿಸಲು ಆಹ್ವಾನ ನೀಡಲಾಗಿದೆ. 40 ವಿಧಾನಸಭಾ ಕ್ಷೇತ್ರದಲ್ಲಿ 20ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಮ್ಯಾಜಿಕ್‌ ನಂಬರ್‌ಗೆ ತೀರಾ ಹತ್ತಿರದಲ್ಲಿದ್ದು, ಇದೀಗ ಶಾಸಕರ ಬೆಂಬಲ ಪತ್ರವನ್ನೂ ಕೂಡ ರಾಜ್ಯಪಾಲರಿಗೆ ನೀಡಲಾಗಿದೆ. ಈ ತಿಂಗಳಲ್ಲೇ ಗೋವಾದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲಿದೆ.

Share Post