Districts

ನವೀನ್‌ ಗ್ಯಾನಗೌಡರ್‌ ನಿವಾಸಕ್ಕೆ ರಾಜ್ಯಪಾಲರ ಭೇಟಿ: ಕುಟುಂಬಸ್ಥರಿಗೆ ಸಾಂತ್ವಾನ

ಹಾವೇರಿ: ವಿದ್ಯಾಭ್ಯಾಸ ಹರಸಿ ಭಾರತದಿಂದ ಉಕ್ರೇನ್‌ಗೆ ತೆರಳಿ ಅಲ್ಲಿ ನಾಲ್ಕನೇ ವರ್ಷದ ಎಂಬಿಬಿಎಸ್‌ ಓದುತ್ತಿದ್ದ ಕನ್ನಡದ ವಿದ್ಯಾರ್ಥಿ ನವೀನ್‌ ಗ್ಯಾನಗೌಡರ್‌ ಉಕ್ರೇನ್-ರಷ್ಯಾ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಮಾರ್ಚ್‌1ರಂದು ಸಾವನ್ನಪ್ಪಿದ್ರು. ಮೃತಪಟ್ಟ ವಿದ್ಯಾರ್ಥಿ ನವೀನ್‌ ಮನೆಗೆ ರಾಜ್ಯಪಾಲರಾದ ಥಾವರ್‌ ಚಂದ್‌ ಗೆಹ್ಲೋತ್‌ ಭೇಟಿ ನೀಡಿದ್ದಾರೆ. ನವೀನ್‌ ಮನೆಗೆ ಭೇಟಿ ನೀಡಿ ಭಾವಚಿತ್ರಕ್ಕೆ ಪುಷ್ಟನಮನವನ್ನು ಅರ್ಪಿಸಿದ್ರು. ಈ ವೇಳೆ ನವೀನ್‌ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ರು.

ನವೀನ್​ ತಂದೆ ಶೇಖರಗೌಡ ಮತ್ತು ತಾಯಿ ವಿಜಯಲಕ್ಷ್ಮಿ ಸೇರಿದಂತೆ ಕುಟುಂಬಸ್ಥರಿಗೆ ಕೈ ಮುಗಿದು ರಾಜ್ಯಪಾಲ ಥಾವರಚಂದ್ ಗೆಹ್ಲೋತ್ ನಮಸ್ಕರಿಸಿದ್ದಾರೆ.‌ ನೋವಿನಲ್ಲಿದ್ದ ಕುಟುಂಬಸ್ಥರಿಗೆ ಧೈರ್ಯ ಹೇಳಿ ಕೆಲವು ಘಟನೆಗಳನ್ನು ನೆನಪು ಮಾಡಿಕೊಂಡ್ರು.

ನವೀನ್‌ ಅಣ್ಣ ಹರ್ಷನಿಗೆ ರಾಜ್ಯಪಾಲರು ಗೋಲ್ಟ್‌ ಮೆಡಲ್‌ ನೀಡಿ ಸನ್ಮಾನ ಮಾಡಿದ್ರು. ನನ್ನ ಮಗ ನವೀನ್‌ ಪ್ರಾಣ ಕಳೆದುಕೊಂಡಾಗ ಕರೆ ಮಾಡಿ ನನಗೆ ಧೈರ್ಯ ಹೇಳಿದ್ರು. ನಿಮ್ಮ ಮಕ್ಕಳು ತುಂಬಾ ಪ್ರತಿಭಾವಂತರು ಹೀಗೆ ಆಗಬಾರದಾಗಿತ್ತು ಎಂದು ಭಾವುಕರಾದ ವಿಚಾರವನ್ನು ನವೀನ್‌ ತಂದೆ ಹೇಳಿದ್ರು.

Share Post