CinemaNational

ರಾಜ್ಯದಲ್ಲಿ RRRಸಿನಿಮಾಗೆ ಹೊಡೆತ..? ಜೇಮ್ಸ್‌ ಪರವಾಗಿ ನಿಂತ ಅಭಿಮಾನಿಗಳು: ಏನಾಗಲಿದೆ ʻತ್ರಿಬಲ್‌Rʼ ಭವಿಷ್ಯ

ಬೆಂಗಳೂರು: ‘RRR’ ಸಿನಿಮಾ ಮಾರ್ಚ್ 25 ರಂದು ಪ್ರಪಂಚದಾದ್ಯಂತ ಬಿಡುಗಡೆಯಾಗುತ್ತಿದೆ. ಈಗಾಗಲೇ ಚಿತ್ರತಂಡ ಸಿನಿಮಾ ಪ್ರಚಾರದಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡಿದ್ದಾರೆ. ನಾಳೆ ತೆರೆಗೆ ಬರಲಿರುವ RRR ಸಿನಿಮಾ ಮೇಲೆ ಪ್ರೇಕ್ಷಕರು ಬಾರೀ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಆದರೆ ಈ ನಡುವೆ ಕರ್ನಾಟಕದಲ್ಲಿ ಆರ್‌ಆರ್‌ಆರ್‌ ಸಿನಿಮಾಗೆ ಕೊಂಚ ಹಿನ್ನೆಡೆ ಆಗುವ ಎಲ್ಲಾ ಲಕ್ಷಣಗಳು ಕಂಡುಬಂದಿವೆ.

ಕರ್ನಾಟಕದಲ್ಲಿ ಈಗಾಗಲೇ ‘ಬಾಯ್‌ಕಾಟ್‌ ಆರ್‌ಆರ್‌ಆರ್‌’ ಎಂಬ ಸ್ಲೋಗನ್‌ಗಳು ಕೇಳಿ ಬರುತ್ತಿವೆ. ಕರ್ನಾಟಕದ ಬಹುತೇಕ ಕಡೆ ಕನ್ನಡ ಭಾಷೆಯಲ್ಲಿ ಚಿತ್ರ ಬಿಡುಗಡೆಯಾಗಿಲ್ಲ. ಕೆಲವು ತಾಂತ್ರಿಕ ಕಾರಣಗಳಿಂದ ಸದ್ಯ ಕರ್ನಾಟಕದಲ್ಲಿ ತೆಲುಗು ಮತ್ತು ಹಿಂದಿಯಲ್ಲಿ ಬಿಡುಗಡೆಯಾಗುತ್ತಿದೆ. ಕನ್ನಡ ಭಾಷೆಯ ಪ್ರಾಶಸ್ತ್ಯದ ಕಾರಣದಿಂದ ನಮ್ಮ ಭಾಷೆಯಲ್ಲಿ ಚಿತ್ರ ಬಿಡುಗಡೆಯಾಗದಿರುವುದರಿಂದ ಅದನ್ನು ಬಹಿಷ್ಕರಿಸಬೇಕು ಎಂಬ ಪೋಸ್ಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದರಿಂದ ಕರ್ನಾಟಕದಲ್ಲಿ ‘RRR’ ಸಿನಿಮಾದ ಆದಾಯಕ್ಕೆ ಧಕ್ಕೆಯಾಗುವುದು ಖಂಡಿತ.

ಇದರ ಜೊತೆಗೆ ಕನ್ನಡದ ಪವರ್ ಸ್ಟಾರ್ ಪುನೀತ್ ಅವರ ಕೊನೆಯ ಚಿತ್ರ ‘ಜೇಮ್ಸ್’ ಮಾರ್ಚ್ 17 ರಂದು ಬಿಡುಗಡೆಯಾಗಿತ್ತು. ಚಿತ್ರ ಬಿಡುಗಡೆಯಾದ ಒಂದು ವಾರದವರೆಗೆ ಕರ್ನಾಟಕದಲ್ಲಿ ಬೇರೆ ಚಿತ್ರವನ್ನು ಬಿಡುಗಡೆ ಮಾಡದಿರಲು ಸಿನಿಮಾ ವಿತರಕರು ಮತ್ತು ಚಿತ್ರರಂಗ ನಿರ್ಧರಿಸಿದೆ. ಇಂದಿಗೆ ಸಿನಿಮಾ ರಿಲೀಸ್ ಆಗಿ ಒಂದು ವಾರವಾಗಿರುವುದರಿಂದ ಇದು ಕೂಡ  ‘ಆರ್ ಆರ್ ಆರ್’ ಪಾಲಿಗೆ ಮುಳ್ಳಾಗಲಿದೆ.

ಪುನೀತ್ ಅಭಿಮಾನಿಗಳು ಮತ್ತು ರಾಜಕೀಯ ನಾಯಕರು ಪುನೀತ್ ಅವರ ಕೊನೆಯ ಚಿತ್ರವನ್ನು ಥಿಯೇಟರ್‌ನಿಂದ ತೆಗೆಯಬಾರದು ಎಂದು ಹೋರಾಟಗಳನ್ನು ಮಾಡ್ತಿದಾರೆ.  ಪುನೀತ್ ಮೇಲಿನ ಅಭಿಮಾನದಿಂದ ಇಷ್ಟೆಲ್ಲ ಮಾಡ್ತಿದಾರೆ. ಇದು ಕೂಡಾ ಕರ್ನಾಟಕದಲ್ಲಿ ‘RRR’ಗೆ ಭಾರಿ ಹೊಡೆತ ಬೀಳುವಂತಿದೆ. ಒಟ್ಟಿನಲ್ಲಿ ಕರ್ನಾಟಕದಲ್ಲಿ ‘RRR’ ಚಿತ್ರಕ್ಕೆ ಸ್ವಲ್ಪ ವಿರೋಧ ವ್ಯಕ್ತವಾಗಿದ್ದು, ನಿರೀಕ್ಷೆಗಿಂತ ಕಡಿಮೆ ಥಿಯೇಟರ್‌ಗಳಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇರುವುದರಿಂದ ರಾಜ್ಯದಲ್ಲಿ ‘RRR’ ಕಲೆಕ್ಷನ್ ಕಡಿಮೆಯಾಗಬಹುದು ಎಂದು ಚಿತ್ರತಂಡ ನಿರೀಕ್ಷಿಸುತ್ತಿದ್ದಾರೆ.

Share Post