BengaluruCinema

ಕಾಶ್ಮೀರಿ ಫೈಲ್ಸ್‌ಗೂ ಜೇಮ್ಸ್‌ ಸಿನಿಮಾಗೂ ಯಾವುದೇ ಸಂಬಂಧ ಇಲ್ಲ-ನಟ ಶಿವರಾಜ್‌ ಕುಮಾರ್

ಬೆಂಗಳೂರು: ಹಲವಾರು ಥಿಯೇಟರ್‌ಗಳಲ್ಲಿ ಜೇಮ್ಸ್‌ ಸಿನಿಮಾ ತೆಗೆಯಲು ಸಿದ್ಧತೆ ನಡೆಯುತ್ತಿದೆ ಎಂಬ ವಿಚಾರಕ್ಕೆ ರಾಜ್ಯದಲ್ಲಿ ಗೊಂದಲ ಸೃಷ್ಟಿಯಾಗಿ ಹೋರಾಟ ನಡೆಯುತ್ತಿದೆ. ಯಾವುದೇ ಕಾರಣಕ್ಕೂ ಜೇಮ್ಸ್‌ ಸಿನಿಮಾ ತೆಗೆಯಬಾರದೆಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ನಟ ಶಿವರಾಜ್‌ ಕುಮಾರ್‌ ಸ್ಪಷ್ಟನೆ ನೀಡಿದ್ದು,  ಅಪ್ಪು ಸಿನಿಮಾ ಬಗ್ಗೆ ಒಂದು ಎಮೋಷನ್‌ ಇದೆ. ಕಾಶ್ಮೀರಿ ಫೈಲ್ಸ್‌ಗೂ ಜೇಮ್ಸ್‌ ಸಿನಿಮಾಗೂ ಯಾವುದೇ ಸಂಬಂಧ ಇಲ್ಲ. ಸಿಎಂ ಭೇಟಿ ಬಳಿಕ ನಟ ಶಿವರಾಜ್‌ ಕುಮಾರ್‌ ಈ ಹೇಳಿಕೆಯನ್ನು ನೀಡಿದ್ದಾರೆ.

ಬುಕ್‌ ಮೈ ಶೋ ತೆಗೆದು ನೋಡಿ ನಿಮಗೇ ತಿಳಿಯುತ್ತದೆ. ಎಲ್ಲಾ ಸರಿಯಾಗಿ ಪರಿಶೀಲನೆ ನಡೆಸಿ ಜನರಿಗೆ ತಿಳಿಸಿ. ಸುಖಾ ಸುಮ್ಮನೆ ತಪ್ಪು ಸಂದೇಶ ರವಾನೆ ಆಗಬಾರದು. ನಮಗೆ ತೊಂದರೆ ಆಗುತ್ತಿರೋದು RRRಸಿನಿಮಾದಿಂದ. ಕನ್ನಡ ಅಂತ ಬಂದ್ರೆ ಎಲ್ಲರ ಸಿನಿಮಾಗಳಿಗೂ ನಾನು ಸಪೋರ್ಟ್‌ ಮಾಡ್ತೇನೆ. ಥಿಯೇಟರ್‌ ಕಮ್ಮಿ ಆದ್ರೆ ಕೊಡೋಣ ಆದ್ರೆ ಎಲ್ಲಾ ಕಡೆ ಥಿಯೇಟರ್‌ ಇದೆ ಅಂದ್ಮೇಲೆ ನಾವು ಯಾಕೆ ಬಿಟ್ಟು ಕೊಡಬೇಕು. ನಮ್ಮ ಭಾಷೆ ಅಂತ ಬಂದಾಗ ಯಾವುದೇ ಕಾರಣಕ್ಕೂ ಹೊಂದಾಣಿಕೆ ಆಗುವ ಸಮಸ್ಯೆಯೇ ಇಲ್ಲ.

ಅಭಿಮಾನಿಗಳು ಯಾವ ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ ಎಂದು ಶಿವರಾಜ್‌ ಕುಮಾರ್‌ ಹೇಳಿದ್ರು.
ಈ ವಿಚಾರವಾಗಿ ಯಾವುದೇ ಪ್ರತಿಭಟನೆಗಳು ಮಾಡುವ ಅಗತ್ಯವಿಲ್ಲ. ಸುಮ್ಮನೆ ಗೊಂದಲ ಸೃಷ್ಟಿ ಮಾಡುವ ಕೆಲಸ ಆಗಬಾರದು. ಟ್ರಾಫಿಕ್‌ ಕಿರಿಕಿರಿ ಉಂಟಾಗಲು ಅನುವು ಮಾಡಿಕೊಡಬಾರದು ಎಂದು ಶಿವರಾಜ್‌ ಕುಮಾರ್‌ ಮನವಿ ಮಾಡಿಕೊಂಡಿದ್ದಾರೆ. ನಾವು ಶಕ್ತಿಧಾಮದ ಬಗ್ಗೆ ಮಾತನಾಡಲು ಸಿಎಂ ಭೇಟಿ ಮಾಡಿದ್ದು ಅದು ಬಿಟ್ಟು ಸಿನಿಮಾ ಬಗ್ಗೆ ಮಾತನಾಡಲು ಬಂದಿಲ್ಲ. ಸಿನಿಮಾ ಅದರ ಪಾಡಿಗೆ ಅದು ಚೆನ್ನಾಗಿ ನಡೆದುಕೊಂಡು ಹೋಗ್ತಿದೆ ಎಂದಿದ್ದಾರೆ.

Share Post