Bengaluru

ಲೈಂಗಿಕ ಶೋಷಣೆಗೆ ಒಳಗಾಗಿದ್ದರಂತೆ ಕಂಗನಾ..!

ಬೆಂಗಳೂರು: ಚಿಕ್ಕಂದಿನಲ್ಲಿ ನನ್ನ ಮೇಲೆ ಲೈಂಗಿಕ ಶೋಷಣೆ ನಡೆದಿತ್ತು ಎಂದು ಬಾಲಿವುಡ್‌ ಖ್ಯಾತ ನಟಿ ಕಂಗನಾ ರನೌತ್‌ ಹೇಳಿದ್ದಾರೆ.. ಏಕ್ತಾ ಕಪೂರ್ ಅವರ ‘ಲಾಕ್ ಅಪ್’ ರಿಯಾಲಿಟಿ ಶೋನಲ್ಲಿ ಕಂಗನಾ ಈ ವಿಚಾರವನ್ನು ಬಾಯ್ಬಿಟ್ಟಿದ್ದಾರೆ. ಮಕ್ಕಳ ಮೇಲಿನ ಲೈಂಗಿಕ ಶೋಷಣೆ ಕುರಿತು ಮಾತನಾಡುತ್ತಾ, ನನ್ನ ಮೇಲೂ ಲೈಂಗಿಕ ಶೋಷಣೆಯಾಗಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನನಗೆ ಐದು ವರ್ಷ ಇದ್ದಾಗ ನಾನು ಹಿಮಾಚಲ ಪ್ರದೇಶದಲ್ಲಿದ್ದೆ. ನನಗಿಂತ ಐದು ದೊಡ್ಡವನಾಗಿದ್ದ ಪಕ್ಕದ ಮನೆಯ ಬಾಲಕ ನನ್ನ ಜೊತೆ ಅಸಭ್ಯವಾಗಿ ವರ್ತಿಸಿದ್ದ. ನನ್ನನ್ನು ಎತ್ತಿಕೊಳ್ಳುವ ನಾಟಕವಾಡಿ ಲೈಂಗಿಕ ಶೋಷಣೆ ಮಾಡಿದ್ದ. ಆತ ಮಾಡುತ್ತಿರುವುದು ತಪ್ಪು ಎಂದು ನನ್ನ ಅರಿವಿಗೆ ಬಂಧರೂ, ಪ್ರತಿಭಟಿಸುವ ಬಗ್ಗೆ ನನಗೆ ಅರಿವಿಗೆ ಬರಲಿಲ್ಲ ಎಂದು ಕಂಗನಾ ಹೇಳಿದ್ದಾರೆ. ಗುಡ್ ಟಚ್, ಬ್ಯಾಡ್ ಟಚ್ ಎನ್ನುವುದು ಇಲ್ಲಿ ಮುಖ್ಯವಾಗುತ್ತೆ. ಬ್ಯಾಡ್ ಟಚ್ ಅನುಭವಕ್ಕೆ ಬಂದಾಗ ಮಕ್ಕಳು ಅದನ್ನು ಹೇಗೆ ಪ್ರತಿಭಟಿಸಬೇಕು. ಅದನ್ನು ದೊಡ್ಡವರಾದ ನಾವು ಹೇಳಿಕೊಡಬೇಕು ಎಂದು ಕಂಗಾನಾ ಇದೇ ವೇಳೆ ಹೇಳಿದ್ದಾರೆ.

Share Post