CrimeNational

ದೀದಿ ನಾಡಲ್ಲಿ ಹಿಂಸಾಚಾರ: ಸುಮೊಟೊ ವಿಚಾರಣೆ ಕೈಗೆತ್ತಿಕೊಂಡ ಕೊಲ್ಕತ್ತಾ ಹೈಕೋರ್ಟ್

ಕಲ್ಕತ್ತಾ ಹೈಕೋರ್ಟ್ ಬುಧವಾರ ಬಿರ್ಭೂಮ್ ಬಾಂಬ್‌ ದಾಳಿ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ಸ್ವೀಕರಿಸಿದೆ. ಮಾರ್ಚ್ 23 ರಂದು ಮಧ್ಯಾಹ್ನ 2 ಗಂಟೆಗೆ ನ್ಯಾಯಾಲಯವು ಸುಮೊಟೊ ವಿಚಾರಣೆ ನಡೆಸಲಿದೆ.ಪ್ರಕರಣವನ್ನು ಗಂಭೀರ ಸ್ವರೂಪದಲ್ಲಿದೆ ಮತ್ತು ದುತರಂತದಲ್ಲಿ ಸಾವು-ನೋವುಗಳುಂಟಾಗಿರುವುದು ದುರದೃಷ್ಟಕರ ಎಂದು ನ್ಯಾಯಾಲಯ ತಿಳಿಸಿದೆ.  ಮಂಗಳವಾರ ಬಿರ್ಭೂಮ್‌ನಲ್ಲಿ ನಡೆದ ಘಟನೆಯ ಕುರಿತು ಬಂಗಾಳ ಬಿಜೆಪಿ ಕಲ್ಕತ್ತಾ ಹೈಕೋರ್ಟ್‌ಗೆ ಮೊರೆ ಹೋಗಿತ್ತು.

ಬಿರ್ಭೂಮ್ ಬೆಂಕಿ ದುರಂತ
ಬಿರ್ಭೂಮ್‌ ಬರೋಸಾಲ್ ಗ್ರಾಮ ಪಂಚಾಯಿತಿ ಉಪಪ್ರಧಾನ್​ (ಉಪಾಧ್ಯಕ್ಷ) ಭಡು ಶೇಖ್​ ಎಂಬುವರನ್ನು ಬಾಂಬ್​ ಹಾಕಿ ಕೊಲ್ಲಲಾಗಿತ್ತು. ಇವರು ಟಿಎಂಸಿ ನಾಯಕರಾಗಿದ್ದು, ಸ್ಥಳೀಯವಾಗಿ ತುಂಬ ಪ್ರಾಬಲ್ಯ ಹೊಂದಿದ ಕಾರಣಕ್ಕಾಗ. ಇವರ ಹತ್ಯೆ ಬೆನ್ನಲ್ಲೇ ಇವರ ಬೆಂಬಲಿಗರು ಆಕ್ರೋಶಗೊಂಡು ಸಿಕ್ಕಸಿಕ್ಕ ಮನೆಗಳಿಗೆ ನುಗ್ಗಿ ಬೆಂಕಿ ಹಚ್ಚಿದ್ರು. ಈ ದುರಂತ ಘಟನೆಯಲ್ಲಿ ಸುಮಾರು 8 ಮಂದಿ ಸಜೀವ ದಹನಗೊಂಡಿದ್ದಾರೆ, ಅದರಲ್ಲಿ ಇಬ್ಬರು ಮಕ್ಕಳೂ ಇದ್ದಾರೆ ಎಂದು ಬಿರ್ಭೂಮ್‌ ಎಸ್​​ಪಿ ನಾಗೇಂದ್ರ ತ್ರಿಪಾಠಿ ಮಾಹಿತಿ ನೀಡಿದ್ದರು.  ಇದನ್ನೀಗ ಹೈಕೋರ್ಟ್ ಸ್ವಯಂಪ್ರೇರಿತವಾಗಿಯೇ ವಿಚಾರಣೆ ನಡೆಸಲು ಒಪ್ಪಿಕೊಂಡಿದೆ.

ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದ್ದು, ಘಟನೆಯ ಕುರಿತು ಕೇಂದ್ರವು ತುರ್ತು ವರದಿಯನ್ನು ಕೇಳಿದೆ. ಈ ಪ್ರಕರಣದಲ್ಲಿ ಇದುವರೆಗೆ ಕನಿಷ್ಠ ಇಪ್ಪತ್ತು ಮಂದಿಯನ್ನು ಬಂಧಿಸಲಾಗಿದೆ. ಘಟನೆ ನಡೆದ ಬಳಿಕ ಹಿಂಸಾಚಾರಕ್ಕೆ ಭಯಬಿದ್ದು ಜನರು ಊರು ತೊರೆಯುತ್ತಿದ್ದಾರೆ. ಘಟನೆ ಬಳಿಕ ಪೊಲೀಸರು ಸರಿಯಾದ ಭದ್ರತೆ ನೀಡುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಈ ಘಟನೆ ಬಳಿಕ ದೀದಿ ಕುರ್ಚಿ ಅಲ್ಲಾಡುವಂತೆ ಕಾಣುತ್ತಿದೆ. ಸಿಎಂ ಹುದ್ದೆಗೆ ದೀದಿ ರಾಜೀನಾಮೆ ನೀಡಬೇಕೆಂದು ಬಿಜೆಪಿ ಒತ್ತಾಯ ಮಾಡುತ್ತಿದೆ. ಘಟನೆ ಹಿಂದೆ ರಾಜಕೀಯ ಕೈವಾಡವಿದೆ. ಸ್ಥಳೀಯವಾಗಿ ಸಾಕಷ್ಟು ಮಂದಿ ಸಾವನ್ನಪ್ಪಿದ್ದಾರೆ.ಅದನ್ನು ಮುಚ್ಚಿ ಹಾಕಲಾಗಿದೆ ಎಂದು ಬಿಜೆಪಿ ನಾಯಕರು ಆರೋಪ ಮಾಡಿದ್ದಾರೆ.

Share Post