ಗುಜರಿ ವಸ್ತುಗಳ ಗೋದಾಮಿಗಳಲ್ಲಿ ಬೆಂಕಿ ದುರಂತ; 11 ಕಾರ್ಮಿಕರು ಸಜೀವ ದಹನ..!
ಹೈದರಾಬಾದ್: ತೆಲಂಗಾಣ ರಾಜಧಾನಿ ಹೈದರಾಬಾದ್ನಲ್ಲಿ ಭಿಕರ ಬೆಂಕಿ ದುರಂತ ಸಂಭವಿಸಿದೆ. ಕಬ್ಬಿಣ ಹಾಗೂ ಪ್ಲಾಸ್ಟಿಕ್ ಗುಜರಿ ಗೋದಾಮಿನಲ್ಲಿ ಈ ದುರಂತ ಸಂಭವಿಸಿದ್ದು, 11 ಮಂದಿ ವಲಸೆ ಕಾರ್ಮಿಕರು ಸಜೀವ ದಹನವಾಗಿದ್ದಾರೆ. ಹೈದರಾಬಾದ್ ನಗರದ ಭೋಯ್ಗುಡ ಏರಿಯಾದಲ್ಲಿ ಕಳೆದ ರಾತ್ರಿ ಈ ದುರಂತ ನಡೆದಿದ್ದು, ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಈ ದುರಂತ ನಡೆದಿದೆ ಎನ್ನಲಾಗಿದೆ.
ಈ ಗೋದಾಮಿನಲ್ಲಿ ಬಿಹಾರ ಮೂಲದ ವಲಸೆ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಅವರು ಗೋದಾಮಿನಲ್ಲೇ ತಂಗಿದ್ದರು ಕೂಡಾ. ಬೆಳಗಿನ ಜಾವ 4 ಗಂಟೆ ಸುಮಾರಿಗೆ ಗೋದಾಮಿನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಕ್ಷಣಾರ್ಧದಲ್ಲೇ ಬೆಂಕಿ ಇಡೀ ಕಟ್ಟಡಕ್ಕೆ ಆವರಿಸಿದೆ. ಈ ವೇಳೆ 13 ಕಾರ್ಮಿಕರು ಟೆರೇಸ್ ಮೇಲೆ ಮಲಗಿದ್ದರು. ಇದ್ರಲ್ಲಿ ಈಗಾಗಲೇ 13 ಕಾರ್ಮಿಕರ ಮೃತದೇಹಗಳು ಪತ್ತೆಯಾಗಿವೆ. ಒಬ್ಬ ಕಾರ್ಮಿಕನಿಗೆ ತೀವ್ರ ಗಾಯಗಳಾಗಿದ್ದು, ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತೆಲಂಗಾಣ ಸರ್ಕಾರ ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.