National

ಪಶ್ಚಿಮ ಬಂಗಾಳದಲ್ಲಿ ಬಾಂಬ್‌ ದಾಳಿ ಪ್ರಕರಣ; ಹಿಂಸಾಚಾರಕ್ಕೆ 12 ಬಲಿ

ಪಶ್ಚಿಮಬಂಗಾಳ: ಪಶ್ಚಿಮ ಬಂಗಾಳದ ಬಿರ್​ಭೂಮ್ ಜಿಲ್ಲೆಯ ರಾಮ್‌ಪುರಹತ್‌ನಲ್ಲಿರುವ  ಬೊಗ್ಟುಯಿ ಗ್ರಾಮದಲ್ಲಿ ನಡೆದ ಹಿಂಸಾಚಾರದಲ್ಲಿ ಸುಮಾರು 12 ಮಂದಿ ಹತರಾಗಿದ್ದಾರೆ. ಅಪರಿಚಿತ ವ್ಯಕ್ತಿಗಳು ಬಾಂಬ್ ದಾಳಿ ನಡೆಸಿದ್ದರಿಂದಾಗಿ ತೃಣಮೂಲ ಕಾಂಗ್ರೆಸ್​ನ ಮುಖಂಡನೋರ್ವ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಹಿಂಸಾಚಾರ ನಡೆದಿದ್ದು, 12 ಮಂದಿ ಸಾವನ್ನಪ್ಪಿದ್ದಾರೆ. 

   ಸೋಮವಾರ ಅಪರಿಚಿತರ ಗುಂಪೊಂದು ದಾಳಿ ನಡೆಸಿತ್ತು. ಇದರಲ್ಲಿ ಬರ್ಶಾಲ್ ಗ್ರಾಮ ಪಂಚಾಯತ್‌ನ ತೃಣಮೂಲ ಕಾಂಗ್ರೆಸ್‌ನ ಉಪಮುಖ್ಯಸ್ಥ ಭದು ಶೇಕ್ ಸಾವನ್ನಪ್ಪಿದ್ದರು. ಇದ್ರಿಂದ ರೊಚ್ಚಿಗೆದ್ದ ಭದು ಶೇಕ್‌ ಬೆಂಬಲಿಗರು ಐದು ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. ಹೀಗಾಗಿ 12 ಮಂದಿ ಸಜೀವದಹನವಾಗಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಎಲ್ಲಾ ಮೃತದೇಹಗಳನ್ನು ಹೊರತೆಗೆದಿದ್ದಾರೆ.

  ರಕ್ಷಣಾ ಕಾರ್ಯ ವೇಗವಾಗಿ ನಡೆಯುತ್ತಿದ್ದು, ಇನ್ನಷ್ಟು ಮೃತದೇಹಗಳು ಪತ್ತೆಯಾಗುವ ಸಾಧ್ಯತೆ ಇದೆ. ಬೊಗ್ಟುಯಿ ಗ್ರಾಮದಲ್ಲಿ ಉದ್ವಿಗ್ನತೆ ಉಂಟಾಗಿದೆ. ಪೊಲೀಸ್ ಪಡೆ, ಯುದ್ಧ ಪಡೆ ನಿಯೋಜಿಸಲಾಗಿದೆ. ಈಗಿನ ವರದಿಗಳ ಪ್ರಕಾರ ತೃಣಮೂಲ ಕಾಂಗ್ರೆಸ್​ನ ಎರಡು ಬಣಗಳ ನಡುವಿನ ವೈಮನಸ್ಯವೇ ಹಿಂಸಾಚಾರಕ್ಕೆ ಕಾರಣ ಎನ್ನಲಾಗಿದೆ. ಭದು ಶೇಕ್​ನನ್ನು ಕೊಂದವರೂ ತೃಣಮೂಲ ಕಾಂಗ್ರೆಸ್​ನ ಮತ್ತೊಂದು ಬಣದವರು ಎನ್ನಲಾಗಿದೆ.

Share Post