National

ಕಾಂಗ್ರೆಸ್‌ ಶಾಸಕರ ರೆಸಾರ್ಟ್‌ನಲ್ಲಿ ಬೃಹತ್‌ ರೇವ್‌ ಪಾರ್ಟಿ; ಭಾರಿ ಪ್ರಮಾಣದ ಡ್ರಗ್ಸ್‌ ವಶ..!

ಚೆನ್ನೈ: ತಮಿಳುನಾಡಿನ ಕಾಂಗ್ರೆಸ್‌ ಶಾಸಕರೊಬ್ಬರ ಒಡೆತನದ ರೆಸಾರ್ಟ್‌ನಲ್ಲಿ ಬೃಹತ್‌ ರೇವ್‌ ಪಾರ್ಟಿ ನಡೆದಿದೆ. ರೇವ್‌ ಪಾರ್ಟಿಯಲ್ಲಿ ಅಕ್ರಮವಾಗಿ ಡ್ರಗ್ಸ್‌ ಮತ್ತು ವಿದೇಶಿ ಮದ್ಯ ಬಳಸಲಾಗುತ್ತಿದೆ ಎಂಬ ಮಾಹಿತಿ ಅರಿತ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಕೋಟ್ಯಂತರ ಬೆಲೆ ಬಾಳುವ ಡ್ರಗ್ಸ್‌, ವಿದೇಶಿ ಮದ್ಯ ಹಾಗೂ ಸಿಗರೇಟ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. 

ಚೆನ್ನೈನ ಇಸಿಆರ್‌ನಲ್ಲಿರುವ ಪನೈಯೂರ್‌ನ ರೆಸಾರ್ಟ್‌ವೊಂದರಲ್ಲಿ ರೇವ್‌ ಪಾರ್ಟಿ ನಡೆಯುತ್ತಿತ್ತು. ಇದರ ಬಗ್ಗೆ ಖಚಿತ ಮಾಹಿತಿ ಅರಿತ ತಾಂಬರಂ ಪೊಲೀಸ್ ಕಮಿಷನರ್ ಎಂ. ರವಿ ನೇತೃತ್ವದ ತಂಡ  ಶನಿವಾರ ರಾತ್ರಿ ದಾಳಿ ನಡೆಸಿದರು. ಈ ವೇಳೆ ತಡರಾತ್ರಿಯಲ್ಲೂ ಸುಮಾರು 500ಕ್ಕೂ ಯುವಕ, ಯುವತಿಯರು ರೆಸಾರ್ಟ್‌ನಲ್ಲಿ ಪಾರ್ಟಿ ಮಾಡುತ್ತಿದ್ದರು. ಪರಿಶೀಲನೆ ನಡೆಸಿದಾಗ ಒಂದು ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಡ್ರಗ್ಸ್‌, ವಿದೇಶಿ ಮದ್ಯ ಪತ್ತೆಯಾಗಿದೆ.

ಈ ದಾಳಿಯಲ್ಲಿ ಕೊಕೇನ್, ಗಾಂಜಾ ಸೇರಿದಂತೆ ಡ್ರಗ್ಸ್, ವಿದೇಶಿ ಮದ್ಯ ಮತ್ತು ವಿದೇಶಿ ಸಿಗರೇಟ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Share Post