Cinema

RRR ಪ್ರೀ ರಿಲೀಸ್‌ ಈವೆಂಟ್‌ಗೆ ಮುಖ್ಯ ಅತಿಥಿಯಾಗಿ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ..!

ಚಿಕ್ಕಬಳ್ಳಾಪುರ: ಬಹು ನಿರೀಕ್ಷಿತ, ದಿ ಮೋಸ್ಟ್ ವೇಟಿಂಗ್ ಮೂವಿ ಆರ್ ಆರ್ ಆರ್ ಪ್ರೀ ರಿಲೀಸ್ ಈವೆಂಟ್ ಇನ್ನು ಕೆಲವೇ ಗಂಟೆಗಳಲ್ಲಿ ನಡೆಯಲಿದೆ. ಚಿತ್ರತಂಡವು ಈ ಹಿಂದೆ ಚಿತ್ರಕ್ಕೆ ಸಂಬಂಧಿಸಿದಂತೆ ಹಲವಾರು ಸಮಾರಂಭಗಳನ್ನು ನಡೆಸಿತ್ತು ಮತ್ತು ಜನವರಿಯಲ್ಲಿ ಚಿತ್ರದ ಬಿಡುಗಡೆಗೆ ಕೂಡ ಮುಂದಾಗಿತ್ತು. ಆದರೆ ಕರೋನಾ ಕಾರಣದಿಂದ ಚಿತ್ರವನ್ನು ಮುಂದೂಡಲಾಯಿತು.

ವಿಶ್ವಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿರುವ ಹಿನ್ನಲೆಯಲ್ಲಿ ಮಾರ್ಚ್ 19 ರಂದು ಚಿಕ್ಕಬಳ್ಳಾಫುರದಲ್ಲಿ ಅದ್ದೂರಿಯಾಗಿ ಪ್ರೀ ರಿಲೀಸ್‌ ಈವೆಂಟ್‌ ಹಮ್ಮಿಕೊಂಡಿದ್ದಾರೆ. ಇದಕ್ಕೆ ಮುಖ್ಯ ಅತಿಥಿಯಾಗಿ ರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಅವರೇ ಬರುತ್ತಿದ್ದಾರೆ ಎಂದು ಜಕ್ಕಣ್ಣ ಸ್ಪಷ್ಟಪಡಿಸಿದ್ದಾರೆ.

ಆರ್‌ಆರ್‌ಆರ್ ಪ್ರೀ ರಿಲೀಸ್ ಈವೆಂಟ್ ಸಮಾರಂಭದ ಜವಾಬ್ದಾರಿಯನ್ನು ಕೆವಿಎನ್ ಪ್ರೊಡಕ್ಷನ್ಸ್‌ನ ವೆಂಕಟ್ ಅವರಿಗೆ ವಹಿಸಿದೆ ಮತ್ತು ಅದಕ್ಕಾಗಿ ಅವರು ಅತ್ಯುತ್ತಮವಾದ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ ಎಂದು ಜಕ್ಕಣ್ಣ ವಿಡಿಯೋದಲ್ಲಿ ತಿಳಿಸಿದ್ದಾರೆ. ಕರ್ನಾಟಕ ಸಿಎಂ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಹಲವು ಸೆಲೆಬ್ರಿಟಿಗಳು ಕೂಡ ಆಗಮಿಸಲಿದ್ದಾರೆ ಎನ್ನಲಾಗಿದೆ.

Share Post