National

ಶೇಕಡಾ 50%ರಷ್ಟು ಮಹಿಳಾ ಉದ್ಯೋಗಿಗಳನ್ನು ಹೆಚ್ಚಿಸಲಿರುವ ಬ್ರಿಟಾನಿಯಾ ಕಂಪನಿ

ಅಸ್ಸಾಂ: FMCG ಬ್ರಿಟಾನಿಯಾ ಇಂಡಸ್ಟ್ರೀಸ್ ಮಹಿಳಾ ಉದ್ಯೋಗಿಗಳ ಸಂಖ್ಯೆಯನ್ನು ಹೆಚ್ಚಿಸಲು ನಿರ್ಧಾರ ಮಾಡಿದೆ. 2024 ರ ವೇಳೆಗೆ ಕಂಪನಿಯಲ್ಲಿ ಮಹಿಳಾ ಕಾರ್ಮಿಕರ ಶೇಕಡಾವಾರು ಪ್ರಮಾಣವನ್ನು 50 ಕ್ಕೆ ಹೆಚ್ಚಿಸುವುದಾಗಿ ಕಂಪನಿ ಘೋಷಿಸಿದೆ. ಸದ್ಯ ಬ್ರಿಟಾನಿಯಾ ಶೇ.38 ಮಹಿಳಾ ಉದ್ಯೋಗಿಗಳನ್ನು ಹೊಂದಿದೆ.ಇದನ್ನು ಶೇ.50ಕ್ಕೆ ಹೆಚ್ಚಿಸಲು ನಿರ್ಧರಿಸಿದೆ ಎಂದು ಬ್ರಿಟಾನಿಯಾ ಇಂಡಸ್ಟ್ರೀಸ್ ಮುಖ್ಯ ಮಾರುಕಟ್ಟೆ ಅಧಿಕಾರಿ (ಸಿಎಂಒ) ಅಮಿತ್ ದೋಷಿ ತಿಳಿಸಿದ್ದಾರೆ. ಅಸ್ಸಾಂನ ಗುವಾಹಟಿಯಲ್ಲಿರುವ ಬ್ರಿಟಾನಿಯಾ ಕಾರ್ಖಾನೆಯಲ್ಲಿ ಶೇ.60ರಷ್ಟು ಮಹಿಳೆಯರಿದ್ದು, ಅದನ್ನು 65ಕ್ಕೆ ಏರಿಸಲಾಗುವುದು ಎಂದರು.

ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣಕ್ಕಾಗಿ ಸಂಸ್ಥೆಯಲ್ಲಿ ಮಹಿಳೆಯರ ಸಂಖ್ಯೆಯನ್ನು ಹೆಚ್ಚಿಸಲು ನಾವು ಬಯಸುತ್ತೇವೆ ಎಂದರು. ಕಂಪನಿಯು ಈಗಾಗಲೇ ಸ್ಟಾರ್ಟಪ್ ಚಾಲೆಂಜ್ ಅನ್ನು ಪ್ರಾರಂಭಿಸಿದೆ ಎಂದು ಅಮಿತ್ ಹೇಳಿದ್ರು. ಇ-ಕಾಮರ್ಸ್, ಡಿಜಿಟಲ್ ಸೇವೆಗಳು, ಮೊಬೈಲ್ ವ್ಯಾನ್‌ಗಳ ಮೂಲಕ ಕಣ್ಣಿನ ಆರೈಕೆ ಸೇವೆಗಳು,, ಮಕ್ಕಳ ಶಿಕ್ಷಣದಂತಹ ಕ್ಷೇತ್ರಗಳಲ್ಲಿ ಸ್ಟಾರ್ಟ್‌ಅಪ್‌ಗಾಗಿ 30 ಮಹಿಳಾ ಉದ್ಯಮಿಗಳಿಗೆ ತಲಾ 10 ಲಕ್ಷ ರೂ. ಮಹಿಳೆಯರಿಗಾಗಿ ಕೌಶಲ್ಯ ತರಬೇತಿಗಾಗಿ ನಾವು ಗೂಗಲ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿದ್ದೇವೆ ಎಂದು ಸಿಎಂಓ ಅಮಿತ್ ಮಾಹಿತಿ ನೀಡಿದ್ದಾರೆ.

Share Post