National

ಪರಸ್ಪರ ಚಪ್ಪಲಿ ಎಸೆದು ಹೋಳಿ ಆಚರಣೆ ಮಾಡಿದ ಜನ: ವಿಡಿಯೋ ವೈರಲ್

ಬಿಹಾರ: ಇಂದು ಭಾರತದಾದ್ಯಂತ ಹೋಳಿ ಹಬ್ಬದ ಸಂಭ್ರಮ ವಿಜಯದ ಸಂಕೇತವಾಗಿ ಇಂದು ದೇಶಾದ್ಯಂತ ಅತ್ಯಂತ ಸಡಗೆದಿಂದ ಓಕುಳಿ ಆಟ ಆಡ್ತಾರೆ. ಎಲ್ಲಾ ಕಡೆ ಬಣ್ಣಗಳಿಂದ ಮಿಂದೇಳುತ್ತಾರೆ. ಬಣ್ಣದ ನೀರು ಎರಚಿ ಬಣ್ಣಗಳನ್ನು ಎರಚಿಕೊಂಡು ಹೋಳಿ ಆಚರಣೆ ಮಾಡುವುದು ಸರ್ವೆ ಸಾಮಾನ್ಯ ಆದರೆ ಇಲ್ಲೊಂದು ಕಡೆ ಹೋಳಿ ಸಂಭ್ರಮದಲ್ಲಿ ಪರಸ್ಪರ ಚಪ್ಪಲಿ ಎಸೆದುಕೊಂಡಿರುವ ಘಟನೆ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಹೌದು ಬಿಹಾರದ ಪಾಟ್ನಾದ ವಾಟರ್‌ ಪಾರ್ಕ್‌ನಲ್ಲಿ ʻಚಪ್ಪಲ್‌ ಮಾರ್‌ ಹೋಳಿʼ ಆಚರಣೆ ಮಾಡಿದ್ದಾರೆ. ನಿನ್ನೆ ದಿನ ಮಾರ್ಚ್‌ 17ರಂದು ನಡೆದ ಛೋಟಿ ಹೋಳಿ ವೇಳೆ ಎಲ್ಲರೂ ವಾಟರ್‌ ಪಾರ್ಕ್‌ನೊಳಗೆ ಬಣ್ಣಗಳ ನೀರನ್ನೆರಚುತ್ತಾ ಸಂಭ್ರಮದಿಂದ ಆಟ ಆಡ್ತಿದ್ದರು. ಇದ್ದಕ್ಕಿದ್ದಂತೆ ಕೆಲವರು ಚಪ್ಪಲಿ ಎಸೆದರು ಕೂಡಲೇ ಒಬ್ಬರನ್ನೊಬ್ಬರು ನೋಡುತ್ತಾ ಎಲ್ಲರೂ ಆ ಬದಿಯಿಂದ ಈ ಬದಿಯವರೆಗೆ ಎಲ್ಲರೂ ಚಪ್ಪಲಿ ಎಸೆಯಲು ಶುರು ಮಾಡಿದ್ರು. ಕೆಲ ಹೊತ್ತನಲ್ಲೀ ವಾಟರ್‌ ಪಾರ್ಕ್‌ ಪೂರಾ ಚಪ್ಪಲಿಗಳಿಂದ ತುಂಬಿ ಹೋಯಿತು. ನೀರಿನಲ್ಲಿ ಚಪ್ಪಲಿಗಳು ತೇಲುತ್ತಿರುವ ವಿಡಿಯೋ ಇದೀಗ ವೈರಲ್‌ ಆಗಿದೆ.

Share Post