Bengaluru

ಹಿಜಾಬ್‌ ನಿರ್ಬಂಧ ವಿಚಾರವಾಗಿ ರಾಜ್ಯಾದ್ಯಂತ ಮುಸ್ಲಿಂ ಸಂಘಟನೆಗಳಿಂದ ಬಂದ್‌ಗೆ ಕರೆ

ಬೆಂಗಳೂರು: ಶಾಲಾ-ಕಾಲೇಜುಗಳಲ್ಲಿ ಹಿಜಾಬ್‌ ಧಾರಣೆ ವಿಚಾರವಾಗಿ ನಡೆದ ವಿಚಾರಣೆಯಲ್ಲಿ ರಾಜ್ಯ ಹೈಕೋರ್ಟ್‌ ಸರ್ಕಾರದ ಪರವಾಗಿ ತೀರ್ಪು ನೀಡಿದೆ. ಯಾವುದೇ ಕಾರಣಕ್ಕೂ ಶಾಲಾ-ಕಾಲೇಜುಗಳಲ್ಲಿ ಧರ್ಮವನ್ನು ಪ್ರತಿನಿಧಿಸುವ ವಸ್ತ್ರ ಧರಿಸದಂತೆ ತೀರ್ಪು ನೀಡಿತ್ತು. ಹಿಜಾಬ್‌ಗೆ ನಿರ್ಬಂಧ ವಿಧಿಸಿದ ಹೈಕೋರ್ಟ್‌ ತೀರ್ಪನ್ನು ಪ್ರಶ್ನಿಸಿ ಇಂದು ಕೆಲ ಮುಸ್ಲಿಂ ಸಂಘಟನೆಗಳು ಬಂದ್‌ಗೆ ಕರೆ ನೀಡಿವೆ. ರಾಜ್ಯಾದ್ಯಂತ ಬಂದ್‌ಗೆ ಕರೆ ನೀಡಿದ್ದು, ಹಲವರು ಪರವಾಗಿ ಇನ್ನೂ ಕೆಲವರು ವಿರೋಧವಾಗಿದ್ದಾರೆ. ಸ್ವತಃ ಅಂಗಡಿ ಮುಂಗಟ್ಟಗಳನ್ನು ಮುಚ್ಚಿ ಪ್ರತಿಭಟನೆಗೆ ಸಹಕಾರ ನೀಡಿದ್ರೆ, ಇನ್ನೂ ಕೆಲವರು ತಮ್ಮ ಕೆಲಸಗಳನ್ನು ತಾವು ಮಾಡ್ತಿದಾರೆ.

ಮುಂಜಾಗ್ರತಾ ಕ್ರಮವಾಗಿ ಬೆಂಗಳೂರಿನ ಕೆಲವು ನಗರಗಳಲ್ಲಿ 144ಸೆಕ್ಷನ್‌ ಜಾರಿ ಮಾಡಲಾಗಿದೆ. ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಆದೇಶ ಮಾಡಿದ್ದಾರೆ. ಸೂಕ್ಷ್ಮ ಪ್ರದೇಶಗಳಾದ ಜೆ ಜೆ ನಗರ, ಬ್ಯಾಟರಾಯನಪುರ, ಶಿವಾಜಿನಗರ, ಕೆ ಜಿ ಹಳ್ಳಿ, ನಾಗವಾರ, ಟ್ಯಾನಿ ರಸ್ತೆ, ಜೆಸಿ ನಗರ ಸೇರಿ ಪ್ರಮುಖ ಏರಿಯಾಗಳಲ್ಲಿ ಬಂದೋಬಸ್ತ್ ಮಾಡಲಾಗಿದೆ. ಮೆರವಣಿಗೆ, ಪ್ರತಿಭಟನೆ, ಜಾಥಾಗಳಿಗೆ ನಿಷೇಧಿ ಹೇರಲಾಗಿದೆ. ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿ ಬೀಟ್ ನಲ್ಲಿ ಇರಲು ಕಮೀಷನರ್ ಸೂಚನೆ ನೀಡಿದ್ದಾರೆ. ಪ್ರಮುಖ ಕಡೆಗಳಲ್ಲಿ ರೂಟ್ ಮಾರ್ಚ್ ಮಾಡುವಂತೆ ತಾಕೀತು ಮಾಡಿದ್ದಾರೆ. ನಗರದಲ್ಲಿ 25 ಕೆಎಸ್ಆರ್‌ಪಿ , 35 ಸಿಎಆರ್ ತುಕಡಿಗಳ ನಿಯೋಜನೆ ಮಾಡಲಾಗಿದೆ. ಆಯಾ ಠಾಣಾ ವ್ಯಾಪ್ತಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚನೆ ನೀಡಲಾಗಿದೆ.

ರಾಜ್ಯದ ಹಲವು ನಗರಗಳಲ್ಲಿ ತರಕಾರಿ ಹೂ ಹಣ್ಣು , ಮಟನ್ ಅಂಗಡಿ ಬಂದ್ ಆಗಿವೆ. ಬೆಳಗಿನ ಜಾವ ಜನರಿಂದ ಕಿಕ್ಕಿರಿದು ತುಂಬಿರುತ್ತಿದ್ದ ಮಾರ್ಕೆಟ್ ಇಂದು ಬಂದ್ ಆಗಿವೆ. ಕೆಲ ಟೀ ಅಂಗಡಿ ಹೊರತು ಪಡಿಸಿ ಬಹತೇಕ ಅಂಗಡಿ ಬಂದ್ ಆಗಿವೆ. ಶಾಂತಿಯುತವಾಗಿ ಬಂದ್ ಆಚರಣೆ ಮಾಡುವಂತೆ ಮುಸ್ಲಿಂ ಸಂಘಟನೆ ಕರೆ ನೀಡಲಾಗಿದೆ. ಹಾಲು ಔಷದ ಹೊರತು ಪಡಿಸಿ ಯಾವುದೇ ರೀತಿ ವಹಿವಾಟು ಇಲ್ಲ. ಬಂದ್ ಹಿನ್ನೆಲೆ ಹಲವು ಜಿಲ್ಲೆಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮತ್ತು ನಿಷೇದಾಜ್ಞೆ ಜಾರಿಯಲ್ಲಿರುವ ಹಿನ್ನೆಲೆ ಯಾವುದೇ ಮೆರವಣಿಗೆ, ಪ್ರತಿಭಟನೆಗೆ ಅವಕಾಶ ನೀಡಿಲ್ಲ. ಗ್ಯಾರೇಜ್‌, ಆಟೋ ಮೋಬೈಲ್ಸ್‌ ಅಂಗಡಿ ಮುಚ್ಚಿದ್ದಾರೆ. ಇನ್ನು ಹಲವೆಡೆ ಜನಜೀವನ ಸಾಮಾನ್ಯವಾಗಿದೆ.

 

Share Post