National

ಕಾಶ್ಮೀರದಲ್ಲಿ ಮುಂಜಾನೆಯೇ ಗುಂಡಿನ ಕಾಳಗ; ನಾಲ್ವರು ಉಗ್ರರ ಹತ್ಯೆ

ಶ್ರೀನಗರ: ಕಾಶ್ಮೀರದ ಮೂರು ಪ್ರತ್ಯೇಕ ಪ್ರದೇಶಗಳಲ್ಲಿ ಭಾರತೀಯ ಸೇನೆ ನಾಲ್ವರು ಉಗ್ರರನ್ನು ಹೊಡೆದುರುಳಿಸಿದೆ. ಇಂದು ಮುಂಜಾನೆ ಸೇನಾಪಡೆಗಳು ಕಾರ್ಯಚರಣೆ ನಡೆಸಿದ್ದು, ಲಷ್ಕರ್‌–ಎ–ತೈಬಾ (ಎಲ್‌ಇಟಿ), ಜೈಶೆ–ಮೊಹಮ್ಮದ್‌(ಜೆಇಎಂ) ಸಂಘಟನೆಗಳ ನಾಲ್ವರು ಉಗ್ರರನ್ನು ಎನ್‌ಕೌಂಟರ್‌ ಮಾಡಿದ್ದಾರೆ.

ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಚೆವಾಕ್ಲನ್‌ ಪ್ರದೇಶದಲ್ಲಿ ಭದ್ರತಾ ಪಡೆಗಳ ಗುಂಡಿಗೆ ಇಬ್ಬರು ಜೈಶೆ–ಮೊಹಮ್ಮದ್‌ ಉಗ್ರರು ಹತರಾಗಿದ್ದಾರೆ. ಇನ್ನು ಗಂದರಬಲ್‌ ಜಿಲ್ಲೆಯ ಸೆರ್ಚ್‌ ಪ್ರದೇಶ ಹಾಗೂ ಉತ್ತರ ಕಾಶ್ಮೀರದ ಹಂದ್ವಾರದ ನೀಚಮ, ರಾಜ್ವಾರ್‌ನಲ್ಲಿ ನಡೆದ ಪ್ರತ್ಯೇಕ ಎನ್‌ಕೌಂಟರ್‌ನಲ್ಲಿ ಇಬ್ಬರು ಎಲ್‌ಇಟಿ ಉಗ್ರರು ಹತ್ಯೆಯಾಗಿದೆ. ಅಲ್ಲದೇ ಎನ್‌ಕೌಂಟರ್‌ ಪ್ರದೇಶದಲ್ಲಿ ಉಗ್ರನೊಬ್ಬ ಜೀವಂತವಾಗಿ ಸೆರೆಯಾಗಿದ್ದಾನೆ.

Share Post