National

ತೆಲಂಗಾಣ ಸಿಎಂ ಕೆಸಿಆರ್‌ ಆರೋಗ್ಯದಲ್ಲಿ ವ್ಯತ್ಯಯ; ಯಶೋಧಾ ಆಸ್ಪತ್ರೆಗೆ ದಾಖಲು

ಹೈದರಾಬಾದ್‌; ಹೃದಯ ಸಂಬಂಧಿ ತೊಂದರೆಯಿಂದಾಗಿ ತೆಲಂಗಾಣ ಸಿಎಂ ಕೆಸಿಆರ್‌ ಹೈದರಾಬಾದ್‌ನ ಯಶೋಧಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಯದಾದ್ರಿ ಭೇಟಿಯನ್ನು ಮುಂದಕ್ಕೆ ಹಾಕಲಾಗಿದೆ.

   ಹೃದಯ ಸಂಬಂಧಿ ತೊಂದರೆ ಇರುವುದರಿಂದ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್‌ ಗೆ ಆಂಜಿಯೋಗ್ರಾಮ್‌ ಪರೀಕ್ಷೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಕಾರ್ಯಾಲಯ ತಿಳಿಸಿದೆ. ಸಿಎಂ ಕೆಸಿಆರ್‌ ಅವರಿಗೆ ಪ್ರತಿ ವರ್ಷ ಫೆಬ್ರವರಿಯಲ್ಲಿ ಪರೀಕ್ಷೆ ಮಾಡಿಸಲಾಗುತ್ತದೆ. ಎರಡು ದಿನಗಳಿಂದ ಸುಸ್ತಾಗುತ್ತಿದೆ ಎಂದು ಹೇಳಿದ್ದರು. ಹೀಗಾಗಿ ಸಾಧಾರಣ ಪರೀಕ್ಷೆಗಳನ್ನು ಮಾಡಲಾಗಿದೆ. ಎರಡಗೈ ಹಾಗೂ ಎಡಗಾಲು ಕೊಂಚ ನೋಯುತ್ತಿದೆ ಎಂದು ಅವರು ಹೇಳಿದ್ದರು. ಹೀಗಾಗಿ ಮುಂಜಾಗ್ರತೆಯಾಗಿ ಇನ್ನೂ ಕೆಲವು ಪರೀಕ್ಷೆಗಳನ್ನು ಮಾಡುತ್ತಿದ್ದೇವೆ ಎಂದು ಸಿಎಂ ಫ್ಯಾಮಿಲಿ ಡಾಕ್ಟರ್‌ ಎಂ.ವಿ,ರಾವ್‌ ತಿಳಿಸಿದ್ದಾರೆ.

   ರೊಟೀಲ್‌ ಪರೀಕ್ಷೆಗಳ ಭಾಗವಾಗಿಯೇ ಮುಖ್ಯಮಂತ್ರಿಗೆ ಸಿಟಿ ಸ್ಕ್ಯಾನ್‌, ಕಾರ್ಡಿಯಾಕ್‌ ಆಂಜಿಯೋಗ್ರಾಮ್‌ ಮಾಡುತ್ತಿದ್ದೇನೆ. ಈ ಪರೀಕ್ಷೆಗಳ ಫಲಿತಾಂಶಗಳ ಆಧಾರದ ಮೇಲೆ ಏನು ಮಾಡಬೇಕೋ ನೋಡುತ್ತೇವೆ. ಅವರ ಆರೋಗ್ಯ ಸ್ಥಿರವಾಗಿಯೇ ಇದೆ. ಕೇವಲ ಮುಂಜಾಗ್ರತೆಯಿಂದಾಗಿ ಪರೀಕ್ಷೆಗಳ ನಡೆಸುತ್ತಿದ್ದೇವೆ ಎಂದು ಡಾ.ಎಂ.ವಿ.ರಾವ್‌ ತಿಳಿಸಿದ್ದಾರೆ ಎಂದು ಸಿಎಂ ಕಾರ್ಯಾಲಯ ತಿಳಿಸಿದೆ.

Share Post