ಉತ್ತರಪ್ರದೇಶದ ಚುನಾವಣೆಯಲ್ಲಿ ಮುಗ್ಗರಿಸಿದ ಕಾಂಗ್ರೆಸ್-ಕಾರಣಗಳು ಇಲ್ಲಿವೆ
ಉತ್ತರಪ್ರದೇಶ: ಐದು ರಾಜ್ಯಗಳ ಚುನಾವಣೆಯಲ್ಲಿ ತೀವ್ರವಾಗಿ ಮುಗ್ಗರಿಸಿದ ಪಕ್ಷಗಳಲ್ಲಿ ಕಾಂಗ್ರೆಸ್ ಕೂಡ ಒಂದು. ಪ್ರಿಯಾಂಕಾ ಗಾಂಧಿಯಿಂದಲೂ ಕಾಂಗ್ರೆಸ್ ಹಣೆಬರಹವನ್ನು ಬದಲಾಯಿಸಲು ಸಾಧ್ಯವಾಗಲಿಲ್ಲ. ಪ್ರಿಯಾಂಕಾ ಉತ್ತರ ಪ್ರದೇಶವನ್ನು ತಮ್ಮ ರಾಜಕೀಯ ಕ್ಷೇತ್ರವನ್ನಾಗಿ ಪರಿವರ್ತಿಸಿದರು. ಗೆಲುವು ಸಾಧಿಸುವ ನಿಟ್ಟಿನಲ್ಲಿ ನಡೆಸಿದ ಚುನಾವಣಾ ರ್ಯಾಲಿಗಳು , ಹತ್ರಾಸ್ ಅತ್ಯಾಚಾರ ಸಂತ್ರಸ್ತೆಯ ತಾಯಿಗೆ ಟಿಕೆಟ್ ಹಂಚಿಕೆ, ರೈತ ಚಳವಳಿಗೆ ಸಂಪೂರ್ಣ ಬೆಂಬಲ ಘೋಷಣೆ ಇವೆಲ್ಲವೂ ಕಾಂಗ್ರೆಸ್ ಮತಬ್ಯಾಂಕ್ ಹೆಚ್ಚಿಸುವಲ್ಲಿ ವಿಫಲವಾಗಿವೆ.
ದೊಡ್ಡ ರಾಜ್ಯ ಯುಪಿಯಲ್ಲಿ ಆತ್ಮವಿಶ್ವಾಸದ ಬದಲು ಅತಿಯಾದ ಆತ್ಮವಿಶ್ವಾಸವನ್ನು ತೋರಿಸಿದೆ. ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳದೆ ಸ್ವಂತ ಬಲದಿಂದ 403 ಸ್ಥಾನಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸಿದೆ. ಪಕ್ಷದಲ್ಲಿ ಪ್ರಿಯಾಂಕಾ ಗಾಂಧಿ ಹೊರತುಪಡಿಸಿ ಬಲಿಷ್ಠ ನಾಯಕನ ಕೊರತೆ ಹಾಗೂ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ದೌರ್ಬಲ್ಯವೇ ಇದಕಕ್ಕೆ ಕಾರಣವಾಗಿದೆ.
ಸರ್ಕಾರದ ದೌರ್ಬಲ್ಯಗಳನ್ನು ತನಗೆ ಅನುಕೂಲವಾಗಿ ಮಾರ್ಪಾಡು ಮಾಡಿಕೊಳ್ಳುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ಅನೇಕ ವರ್ಷಗಳಿಂದ ಅಧಿಕಾರದಿಂದ ದೂರ ಉಳಿದಿದ್ದು ಹಾಗೂ ಸ್ಥಳೀಯ ಮಟ್ಟದಲ್ಲಿ ಪಕ್ಷ ದುರ್ಬಲವಾಗಿರುವುದೂ ಕೂಡ ಹಿನ್ನೆಡೆಗೆ ಕಾರಣವಾಗಿದೆ. ಇದರ ಹೊರತಾಗಿ ಕಾಂಗ್ರೆಸ್ ನೀಡಿದ ಭಾರೀ ಆಶ್ವಾಸನೆಗಳು ಉತ್ತರ ಪ್ರದೇಶದ ಜನರನ್ನು ನಂಬಿಸುವಲ್ಲಿ ವಿಫಲವಾಗಿದೆ.