ಮಣಪ್ಪುರಂ ಗೋಲ್ಡ್ಗ ಕಂಪನಿಗೆ ಸಿಬ್ಬಂದಿಯಿಂದಲೇ ಮೋಸ; ನಾಲ್ವರು ಅರೆಸ್ಟ್
ಬೆಂಗಳೂರು: ಮಣಪ್ಪುರಂ ಗೋಲ್ಡ್ ಫೈನಾನ್ಸ್ನಲ್ಲಿ ಸಿಬ್ಬಂದಿಯೇ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆಸಿರುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಮಣಪ್ಪುರಂ ಗೋಲ್ಡ್ ಫೈನಾನ್ಸ್ ಕಂಪನಿಗ ರೀಜನಲ್ ಮ್ಯಾನೇಜರ್ ಪೊಲೀಸರಿಗೆ ದೂರು ನೀಡಿದ್ದು, ಯಶವಂತಪುರ ಪೊಲೀಸರು ನಾಲ್ವರು ಸಿಬ್ಬಂದಿಯನ್ನು ಅರೆಸ್ಟ್ ಮಾಡಿದ್ದಾರೆ.
ಮಣಪ್ಪುರಂ ಗೋಲ್ಡ್ ಸಂಸ್ಥೆ ಸಿಬ್ಬಂದಿಯಾದ ಅಮರ್ ನಾಥ್, ಶಿವಕುಮಾರ್, ಮೋನಿಷಾ ಸೇರಿದಂತೆ ನಾಲ್ವರು ಬಂಧನಕ್ಕೊಳಗಾಗಿದ್ದಾರೆ. ಯಶವಂತಪುರ ಬ್ರ್ಯಾಂಚ್ನ ಮಣಪುರಂ ಗೋಲ್ಡ್ ಫೈನಾನ್ಸ್ನಲ್ಲಿ ಸಿಬ್ಬಂದಿಗಳು ಅಡವಿಟ್ಟ ಚಿನ್ನವನ್ನು ವೈಯಕ್ತಿಕವಾಗಿ ಬಳಸಿಕೊಂಡಿದ್ದಾರೆ ಎಂಬ ಆರೋಪವಿದೆ. ಈ ಸಂಬಂಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಎರಡು ಎಫ್ಐಆರ್ಗಳು ದಾಖಲಾಗಿವೆ.
ಆರೋಪಿಗಳಿಂದ ಕಂಪನಿಗೆ ಬರೊಬ್ಬರಿ 2 ಕೋಟಿ ನಷ್ಟವಾಗಿದ್ದು, 18 ವಿವಿಧ ಖಾತೆಗಳ ತೆರೆದು ಅವ್ಯವಹಾರ ಮಾಡಿದ್ದಾರೆ ಎಂಬ ಮಾಹಿತಿಯಿದೆ. ಸಿಸ್ಟಂನಲ್ಲಿ ಸುಳ್ಳು ಎಂಟ್ರಿ ಮಾಡುವ ಮೂಲಕ ಕಂಪನಿಗೆ ಮೋಸ ಮಾಡಿದ್ದಾರೆ. ಯಶವಂತಪುರ ಪೊಲೀಸರು ಪ್ರಕರಣ ಸಂಬಂಧ ನಾಲ್ವರನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.