International

ಕೀವ್‌ನಲ್ಲಿ ಸಿಲುಕಿದ್ದ ಮಾಜಿ ಮಿಸ್‌ ಉಕ್ರೇನ್‌ ಹೊರಬಂದು ಸೇಫಾಗಿದ್ದು ಹೇಗೆ..?

ಲಾಸ್ ಏಂಜಲೀಸ್: ರಷ್ಯಾ ಯುದ್ಧ ಮಾಡುತ್ತಿರುವುದರಿಂದ ಪ್ರಾಣಭೀತಿಯಿಂದ ಲಕ್ಷಾಂತರ ಮಂದಿ ಉಕ್ರೇನ್‌ ತೊರೆಯುತ್ತಿದ್ದಾರೆ. ಅದ್ರಲ್ಲಿ ಮಾಜಿ ‘ಮಿಸ್ ಉಕ್ರೇನ್’ ವೆರೊನಿಕಾ ದಿಡುಸೆಂಕೊ ಕೂಡ ಒಬ್ಬರು. ಕೀವ್‌ ನಗರದಲ್ಲಿ ರಷ್ಯಾ ಸೇನೆ ಗುಂಡಿನ ಸುರಿಮಳೆ ಸುರಿಸುತ್ತಿದ್ದರೆ, ವೆರೊನಿಕಾ ಕಂಗಾಲಾಗಿ ಕುಳಿತಿದ್ದರು. ತಮ್ಮ ಏಳು ವರ್ಷದ ಮಗುವನ್ನು ಉಳಿಸಿಕೊಳ್ಳಲು ಪರದಾಡುತ್ತಿದ್ದರು. ಕೊನೆಗೂ ಅವರು ತಮ್ಮ ಮಗನೊಂದಿಗೆ ಕೀವ್‌ ನಗರ ಬಿಟ್ಟು ಹೊರಬಂದಿದ್ದಾರೆ. ಉಕ್ರೇನ್‌ನಿಂದ ಹೊರಬಂದಿರುವ ಅವರು, ಉಕ್ರೇನ್‌ ಜನರು ಎದುರಿಸುತ್ತಿರುವ ಭೀಕರ ಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ.

ವೆರೊನಿಕಾ ೨೦೧೮ರಲ್ಲಿ ಮಿಸ್‌ ಉಕ್ರೇನ್‌ ಆಗಿ ಆಯ್ಕೆಯಾಗಿದ್ದರು. ಅವರು ಈಗ ಕೀವ್‌ ನಗರದಿಂದ ಸೇಫಾಗಿ ಹೊರಬಂದಿದ್ದಾರೆ. ನಂತರ ಅವರು ಹೀಗೆ ಹೇಳಿದ್ದಾರೆ. ರಷ್ಯಾ ದಾಳಿ ಮಾಡಿದ ಮೊದಲ ದಿನ ಭಾರೀ ಸ್ಫೋಟ, ಸೈರನ್ ಸದ್ದನ್ನು ಕೇಳಿ ಗಾಬರಿಯಿಂದ ಬೆಳಗ್ಗೆ ಎದ್ದೆವು. ಭಯಗೊಂಡು ಸಾವಿರಾರು ಉಕ್ರೇನ್ ಜನರಂತೆಯೇ ನಾನೂ ಹೊರಗೆ ಓಡಿ ಬಂದೆ. ರಕ್ಷಣೆಗಾಗಿ ನನಗೆ ಸೈರನ್, ಬಾಂಬ್ ಸ್ಫೋಟ ಮತ್ತು ರಾಕೆಟ್ ದಾಳಿಗಳಿಲ್ಲದ ಚಿಕ್ಕ ಸ್ಥಳವೂ ಕಾಣಲಿಲ್ಲ. ಜೀವ ಕೈಯಲ್ಲಿಡಿದುಕೊಂಡು ಭಯದಲ್ಲೇ ಗಡಿ ತಲುಪಿದೆವು ಎಂದು ಮೆರೊನಿಕಾ ಹೇಳಿದ್ದಾರೆ.ಸಾಹಸ ಮಾಡಿ ಮಾಲ್ಡೊವಾ ತಲುಪಿದ್ದ ಅವರು, ಯುರೋಪಿಯನ್ ದೇಶಗಳನ್ನು ದಾಟಿ ಸ್ವಿಡ್ಜರ್ಲೆಂಡ್‌ನ ಜಿನಿವಾ ತಲುಪಿದ್ದರು. ವೀಸಾ ಸಮಸ್ಯೆಯಿಂದಾಗಿ ಮಗನನ್ನು ಜಿನಿವಾದಲ್ಲೇ ಬಿಟ್ಟು ಅಮೆರಿಕಕ್ಕೆ ಪ್ರಯಾಣಿಸುವ ನಿರ್ಧಾರ ಕೈಗೊಂಡೆ ಎಂದು ಅವರಿ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

Share Post