Bengaluru

12ನೇ ` ಬೆಂಗಳೂರು-ಇಂಡಿಯಾ ನ್ಯಾನೋ ’ ಸಮಾವೇಶ ಉದ್ಘಾಟಿಸಿದ ಸಿಎಂ ಬೊಮ್ಮಾಯಿ

ಬೆಂಗಳೂರು:  ಇಂದು ಮಾನ್ಯ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರು ಐಟಿ-ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆಯ ವತಿಯಿಂದ ಹೊಟೇಲ್ ಶಾಂಗ್ರಿ-ಲಾ ಇಲ್ಲಿ ಆಯೋಜಿಸಿರುವ 12ನೇ ` ಬೆಂಗಳೂರು-ಇಂಡಿಯಾ ನ್ಯಾನೋ ’ ಸಮಾವೇಶವನ್ನು ಉದ್ಘಾಟಿಸಿದ್ರು. ಉದ್ಘಾಟನೆ ಬಳಿಕ  ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಿಎಂ, ವಿದ್ಯಾರ್ಥಿಗಳು ನ್ಯಾನೋ ಟೆಕ್ನಾಲಜಿಯನ್ನ ಬಳಸಬೇಕು. ಇದರಿಂದ ನಮ್ಮ ಬದುಕು ಸುಧಾರಿಸಲು ಸಾಧ್ಯವಾಗುತ್ತೆ. ನ್ಯಾನೋ ಮೇಳದಲ್ಲಿ 2000ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗಿದ್ದು, ಆಸಕ್ತರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದ್ರು.

ವರ್ಚುವಲ್ ಮೂಲಕ ನಡೆಯುತ್ತಿರುವ ಈ ನ್ಯಾನೋ ಸಮ್ಮೇಳನಕ್ಕೆ 2500ಕ್ಕೂ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದ ಪ್ರತಿನಿಧಿಗಳು ಭಾಗವಹಿಸಿದ್ದಾರೆ. ಸಂಶೋಧನೆ, ಆವಿಷ್ಕಾರದಲ್ಲಿ ಕರ್ನಾಟಕವೂ ಮುಂದಿದೆ. ನ್ಯಾನೋ ತಂತ್ರಜ್ಞಾನವೂ ನಿರಂತರ ಕಲಿಕೆಯ ಭಾಗವಾಗಿದೆ ಎಂದರು.  ಸಭೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಡಾ. ಅಶ್ವತ್ಥನಾರಾಯಣ, ಜವಾಹರಲಾಲ್ ನೆಹರು ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರದ ಗೌರವಾಧ್ಯಕ್ಷ ವಿಜ್ಞಾನಿ ಪ್ರೊ. ಸಿ ಎನ್ ಆರ್ ರಾವ್, ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವರಾದ ರಾಜೀವ್ ಚಂದ್ರಶೇಖರ್, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಮಣ ರೆಡ್ಡಿ ಸೇರಿದಂತೆ ಇತರೆ ವಿಜ್ಞಾನಿಗಳು ಉಪಸ್ಥಿತರಿದ್ದರು.

ಮಹಿಳಾ ದಿನಾಚರಣೆ ಅಂಗವಾಗಿ ವ್ಯಾಪಾರ ಮೇಳಕ್ಕೆ ಚಾಲನೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ 2022 ಅಂಗವಾಗಿ ವಿಧಾನಸೌಧದಲ್ಲಿ ಆಯೋಜಿಸಲಾಗಿರುವ ವ್ಯಾಪಾರ ಮೇಳಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಚಿವ ಡಾ.ಸಿ ಎನ್ ಅಶ್ವಥ್ ನಾರಾಯಣ, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್, ಕೌಶಲ್ಯ ಅಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಇಂದಿನಿಂದ ಮೂರು ದಿನಗಳ ಕಾಲ ಈ ಮೇಳ ನಡೆಯಲಿದ್ದು, ವ್ಯಾಪಾರ ಮತ್ತು ಪ್ರದರ್ಶನ ನಡೆಯಲಿದೆ. ಇದರಲ್ಲಿ ರಾಜ್ಯದ ಪ್ರಮುಖ ಕರಕುಶಲ ವಸ್ತುಗಳು, ಇಳಕಲ್‌ ಸೀರೆ, ಚನ್ನಪಟ್ಟಣದ ಗೊಂಬೆಗಳು, ಆಹಾರ ತಯಾರಿಕಾ ಸಾಮಗ್ರಿ ಸೇರಿದಂತೆ ಹಲವಾರು ವಸ್ತುಗಳು ಸೇರಿವೆ.

Share Post