ಉಕ್ರೇನ್‌ನ ನಾಲ್ಕು ಪ್ರದೇಶಗಳಲ್ಲಿ ಕದನ ವಿರಾಮ ಘೋಷಣೆ: ಇತರೆ ದೇಶಗಳ ಪ್ರಜೆಗಳ ಸ್ಥಳಾಂತರಕ್ಕೆ ರಷ್ಯಾ ನಿರ್ಣಯ
ಉಕ್ರೇನ್: ಕಳೆದ 12 ದಿನಗಳಿಂದ ರಷ್ಯಾ-ಉಕ್ರೇನ್ ನಡುವೆ ಯುದ್ಧ ನಡೆಯುತ್ತಲೇ ಇದೆ. ಇದರಿಂದ ಹೊರಬರಲಾಗದೆ ಅಲ್ಲಿಯೇ ಸಿಲುಕಿ ಸಾವಿರಾರು ಜನ ಇತರೆ ದೇಶಗಳ ಪ್ರಜೆಗಳು ಒದ್ದಾಡುತ್ತಿದ್ದಾರೆ. ಅನ್ನ ನೀರಿಲ್ಲದೆ ಹಸಿವಿನಿಂದ ಬಳಲಿದ್ದಾರೆ. ಭಾರತೀಯ ವಿದ್ಯಾರ್ಥಿಗಳು ಸೇರಿದಂತೆ ಎಲ್ಲರೂ ತಮ್ಮನ್ನು ವಾಪಸ್ ತಮ್ಮ ದೇಶಕ್ಕೆ ಸ್ಥಳಾಂತರ ಮಾಡುವಂತೆ ಮನವಿ ಮಾಡಿಕೊಂಡಿದ್ರು.
ಆದರೆ ರಷ್ಯಾ ದಾಳಿಯಿಂದಾಗಿ ಹೊರಬರಲಾಗದೆ ಬಂಕರ್‌ಗಳಲ್ಲಿ ಅಡಗಿ ಕುಳಿತಿದ್ದ ನಾಗರೀಕರ ಸ್ಥಳಾಂತರ ಮಾಡುವ ಉದ್ದೇಶದಿಂದ ರಷ್ಯಾ ಕದನ ವಿರಾಮ ಘೋಷನೆ ಮಾಡಿದೆ. ಉಕ್ರೇನ್‌ನ ನಾಲ್ಕು ಪ್ರದೇಶಗಳಲ್ಲಿ ಕದನ ವಿರಾಮ ಘೋಷಣೆಯಾಗಿದೆ. ಕೀವ್, ಮರಿಯುಪೋಲ್, ಖಾರ್ಕೀವ್, ಸುಮಿ ನಗರಗಳಲ್ಲಿ ಭಾರತೀಯ ಕಾಲಮಾನದ ಪ್ರಕಾರ 12.30ರಿಂದ ಕದನ ವಿರಾಮ ಘೋಷಣೆ ಮಾಡಿದೆ.
ಉಕ್ರೇನ್ ಈ ನಗರಗಳಲ್ಲಿ ಸಿಲುಕಿರುವ ಪ್ರಜೆಗಳು ಅವರವರ ತಾಯ್ನಾಡಿಗೆ ತೆರಳಲು ಮಾನವೀಯ ಕಾರಿಡಾರ್ಗಳನ್ನು ತೆರೆಯುವ ಸಲುವಾಗಿ ಈ ಯುದ್ಧ ವಿರಾಮ ಘೋಷಣೆ ಮಾಡಿರುವುದಾಗಿ ರಷ್ಯಾ ಹೇಳಿದೆ. ಈಗಾಗಲೇ ಉಕ್ರೇನ್‌ನಲ್ಲಿ ಸಿಲುಕಿದ್ದ ಭಾರತೀಯರನ್ನು ಆಪರೇಷನ್ ಗಂಗಾ ಮೂಲಕ ತಾಯ್ನಾಡಿಗೆ ಕರೆತರಲಾಗಿದೆ. ಸುಮಿ ವಲಯದಲ್ಲಿ ಸಿಲುಕಿರುವ ಭಾರತೀಯರ ಸ್ಥಳಾಂತರಕ್ಕೆ ಭಾರತ ಸರ್ಕಾರ ಪ್ರಯತ್ನ ಪಡುತ್ತಿತ್ತು. ಯುದ್ಧ ಘೋಷಣೆ ಮಾಡಿರುವುದು ಭಾರತೀಯರ ಸ್ಥಳಾಂತರಕ್ಕೆ ನೆರವಾಗಲಿದೆ.