ಕಾರು ಅಪಘಾತದ ಬಳಿಕ ಮತ್ತೊಂದು ಹಾಡು ಹಾಡಿದ ಕಚ್ಚಾ ಬಾದಾಮ್ ಸಿಂಗರ್
ಭುವನ್ ಬಾಡ್ಯಾಕರ್ ಅಂದರೆ ಇದಕ್ಕೂ ಮುನ್ನ ಯಾರೆಂದು ಗೊತ್ತಿರಲಿಲ್ಲ ಆದರೆ ಕಚ್ಚಾ ಬಾದಾಮ್ ಹಾಡಿನ ಮೂಲಕ ಇಡೀ ದೇಶಾದ್ಯಂತ ಹೆಸರು ಮಾಡಿದ್ದಾರೆ. ಕೆಲ ತಿಂಗಳ ಹಿಂದೆ ಸಾಮಾಜಿಕ ಜಾಲತಾನದಲ್ಲಿ ವೈರಲ್ ಆಗಿದ್ದ ಈ ಹಾಡಿಗೆ ಪಾರವಾದ ಕೀರ್ತಿ ಬಂದಿದೆ. ಇದರಿಂದ ಹೆದರಿ ಹೊರಬರಲು ಕಾರು ಖರೀದಿಸಿ ಅದರಲ್ಲಿ ಪ್ರಯಾಣ ನಡೆಸುತ್ತಿದ್ದರು. ಕಾರು ಖರೀದಿಸಿದ ಬಳಿಕ ಪಶ್ಚಿಮ ಬಂಗಾಳದ ಬಿರ್‌ಭೂಮ್ ಜಿಲ್ಲೆಯಲ್ಲಿ ಅಪಘಾತಕ್ಕೀಡಾದ್ರು. ಹೊಸ ಕಾರನ್ನು ಓಡಿಸುವುದನ್ನು ಕಲಿಯುತ್ತಿದ್ದಾಗ ಗೋಡೆಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಅವರ ಮುಖದ ಮೇಲೂ ಕೆಲವು ಗಾಯಗಳಿದ್ದು, ಚಿಕಿತ್ಸೆ ಪಡೆಯುತ್ತಿದ್ರು.
ಇದೀಗ ಅಪಘಾತದಿಂದ ಚೇತರಿಸಿಕೊಂಡ ಬಳಿಕ ಭುವನ್ ಬಾಡ್ಯಾಕರ್ ಮತ್ತೊಂದು ಹಾಡಿನ ಮೂಲಕ ಟ್ರೆಂಡ್ ಸೃಷ್ಟಿ ಮಾಡಿದ್ದಾರೆ. ಅಮರ್ ನೋಥುನ್ ಗರಿ (ಬಂಗಾಲಿಯಲ್ಲಿ ನನ್ನ ಹೊಸ ಕಾರು) ಎಂಬ ಹಾಡು ವೈರಲ್ ಆಗಿದೆ.
ಈ ಹಾಡಿನಲ್ಲಿ ಅವರು ಹೇಗೆ ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿಸಿದರು ಮತ್ತು ಕಲಿಯುವಾಗ ದುರದೃಷ್ಟವಶಾತ್ ಗೋಡೆಗೆ ಹೇಗೆ ಡಿಕ್ಕಿ ಹೊಡೆದರು ಎಂದು ವಿವರಿಸುತ್ತಾರೆ. ಅಪಗಾತವಾದ್ರೂ ಗಂಭೀರ ಗಾಯಗಳಾಗದೆ ದೇವರು ನನ್ನನ್ನು ರಕ್ಷಿಸಿದ್ದಾರೆಂದು ಹಾಡಿನ ಮೂಲಕ ತಿಳಿಸಿದ್ದಾರೆ.
ಹಾಡಿನ ಕುರಿತು ಮಾಧ್ಯಮವೊಂದಕ್ಕೆ ಮಾತನಾಡಿದ ಬಡ್ಯಾಕರ್ .. ‘ನಾನು ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿದ್ದೇನೆ. ಓಡಿಸಲು ಪ್ರಯತ್ನಿಸುವ ವೇಳೆ ಗೋಡೆಗೆ ಡಿಕ್ಕಿ ಹೊಡೆದು ಅಪಘಾತದಲ್ಲಿ ಗಾಯಗೊಂಡಿದ್ದೇನೆ. ಈಗ ಯಾವುದೇ ತೊಂದರೆ ಇಲ್ಲ ಹಾಗಾಗಿಯೇ ಅದಕ್ಕಾಗಿಯೇ ನಾನು ಕಾರಿನ ಬಗ್ಗೆ ಹೊಸ ಹಾಡನ್ನು ಹಾಡಲು ಬಯಸಿದೆ ಎಂದು ಅವರು ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.