ಅಮೆರಿಕಾದಲ್ಲಿ RRR ಧಮಾಕಾ: ರಿಲೀಸ್‌ಗೂ ಮೊದಲೇ ಬುಕಿಂಗ್ ಹವಾ ಜೋರು
ಅಮೆರಿಕಾ: ಜಕ್ಕಣ್ಣನ ಸಿನಿಮಾ ಅಂದ್ರೆ ಒಂಥರಾ ಕ್ರೇಜ್…ಪ್ರೇಕ್ಷಕರಂತೂ ಆತ ನಿರ್ದೇಶಿಸಿರುವ ಸಿನಿಮಾ ವೀಕ್ಷಣೆಗೆ ನಾಲ್ಕು ವರ್ಷ ಏನು ಎಂಟು ವರ್ಷ ಬೇಕಾದ್ರೂ ಕಾಯ್ತಾರೆ ಅಂಥದ್ದೊಂದು ಕ್ರೇಜ್ ಹುಟ್ಟು ಹಾಕಿದ್ದಾರೆ ರಾಜಮೌಳಿ. ಈಗ ಭಾರತ ಮಾತ್ರವಲ್ಲ ಅಂತರಾಷ್ಟ್ರೀಯ ಮಟ್ಟದಲ್ಲಿ ಕೇಳಿಬರುತ್ತಿರುವ ಸಿನಿಮಾದ ಹೆಸರು ಅಂದ್ರೆ ಅದು RRR. ರಾಜಮೌಳಿ ಕಾಲಿಟ್ಟಲ್ಲೆಲ್ಲಾ ದಾಖಲೆಗಳನ್ನು ಉಡೀಸ್ ಮಾಡ್ತಿದಾರೆ. ಆರ್‌ಆರ್‌ಆರ್ ಬಿಡುಗಡೆಗೂ ಮುನ್ನ ಬುಕಿಂಗ್ ರೆಕಾರ್ಡ್ ದಾಖಲೆ ಮಟ್ಟ ತಲುಪಿದೆ. ಜನವರಿಯಲ್ಲಿ ಬಿಡುಗಡೆಯಾಗಲಿದೆ ಎಂದುಉ US ನಲ್ಲಿ ಪ್ರಿ-ಬುಕಿಂಗ್‌ಗಳು ನಡೆದಿದ್ದವು.
ಆದರೆ ಕಾರಣಾಂತರಗಳಿಂದ ಚಿತ್ರ ಮುಂದೂಡಲ್ಪಟ್ಟಿದ್ದರಿಂದ. ಬುಕ್ ಮಾಡಿದ ಎಲ್ಲಾ ವೀಕ್ಷಕರಿಗೆ ಬುಕಿಂಗ್ ಹಣ ಮರುಪಾವತಿ ಮಾಡಲಾಗಿತ್ತು. ಈಗ ಮತ್ತೊಮ್ಮೆ ಬಿಡುಗಡೆಗೆ ಸಿದ್ಧತೆ ನಡೆಸಿದ್ದು, ಅಮೆರಿಕದಲ್ಲಿ ಮತ್ತೆ ಅದೇ ಮಟ್ಟದಲ್ಲಿ ಬುಕ್ಕಿಂಗ್ ಶುರುವಾಗಿದೆ. US ನಲ್ಲಿ ಪ್ರೀಮಿಯಂ ಶೋಗಳಿಗೆ ಇಪ್ಪತ್ತು ದಿನಗಳ ಮೊದಲೇ ಮುಂಗಡ ಬುಕ್ಕಿಂಗ್‌ಗಳು ಪ್ರಾರಂಭವಾಗುತ್ತವೆ. ಈಗ ಮುಂಗಡ ಬುಕ್ಕಿಂಗ್‌ನಲ್ಲಿಯೂ ಹೊಸ ದಾಖಲೆಗಳನ್ನು ನಿರ್ಮಿಸಲಾಗಿದೆ.
ಇದಕ್ಕೆ ಸಂಬಂಧಿಸಿದಂತೆ RRRಚಿತ್ರತಂಡ ಟ್ವೀಟ್ ಮಾಡಿ ಮುಂಗಡ ಕಾಯ್ದಿರಿಸಿದ ವೀಕ್ಷಕರಿಗೆ ಧನ್ಯವಾದ ತಿಳಿಸಿದ್ದಾರೆ. ಕಳೆದ ಬಾರಿ ಮುಕಿಂಗ್ ಮಾಡಿ ಸಿನಿಮಾ ಪೋಸ್ಟ್ ಪೋನ್ ಆದ ಕಾರಣ ಹಣ ಮರುಪಾವತಿ ಮಾಡಿದ್ವಿ. ಇದೀಗ ಮತ್ತೆ ಸಿನಿಮಾ ತೆರೆ ಕಾಣಲು ಸಿದ್ಧವಾಗಿದೆ. ಅದೇ ಪ್ರೀತಿ ಮತ್ತೆ ನಿಮ್ಮಲ್ಲಿ ಕಾಣ್ತಿದೆ. ಇನ್ನೂ ಇಪ್ಪತ್ತು ದಿನ ಇರುವಾಗಲೇ ಮುಂಗಡ ಬುಕಿಂಗ್ ಆಗಿರುವುದು ನಮಗೆ ಸಂತೋಷವಾಗಿದೆ ಎಂದು ತಿಳಿಸಿದ್ದಾರೆ.
All our USA & Overseas audience who booked their tickets for #RRRMovie last month were refunded successfully since our film had to be postponed. Days have passed but your love has stayed the same.❤️ Happy Booking!!
This 25th will be the biggest cinematic experience ever. ????
— RRR Movie (@RRRMovie) March 5, 2022