Bengaluru

ಪ್ರತಿಷ್ಠಿಯ ಕಂಪನಿ ಹೆಸರಲ್ಲಿ ವಾಲ್‌ಕೇರ್‌ ಪುಟ್ಟಿ ತಯಾರಿ; ಆರೋಪಿ ಅಂದರ್‌

ಬೆಂಗಳೂರು: ಬಿರ್ಲಾ ಕಂಪನಿಯ ವಾಲ್ ಕೇರ್ ಹೆಸರಲ್ಲಿ ನಕಲಿ ವಾಲ್ ಕೇರ್ ಪುಟ್ಟಿ ತಯಾರಿಸುತ್ತಿದ್ದವರನ್ನು ಬಂಧಿಸಲಾಗಿದೆ. ಬೆಂಗಳೂರು ಸಿಸಿಬಿ ಪೊಲೀಸರು ನಡೆಸಿದ ಕಾರ್ಯಾಚರಣೆ ವೇಳೆ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.

ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿದ್ದ  ಫ್ಯಾಕ್ಟರಿಯಲ್ಲಿ ಬಿರ್ಲಾ ಕಂಪನಿಯ ಹೆಸರಲ್ಲಿ ವಾಲ್‌ ಕೇರ್‌ ಪುಟ್ಟಿ ತಯಾರಿಸಲಾಗುತ್ತಿತ್ತು. ಈ ನಕಲಿ ಮಾಲನ್ನು ಎಲ್ಲೆಡೆ ಮಾರಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ಅರಿತ ಪೊಲೀಸರು, ದಾಳಿ ನಡೆಸಿದ್ದು ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ.

ಸ್ಥಳದಲ್ಲಿದ್ದ  105 ಪ್ಯಾಕೆಟ್ ನಕಲಿ ವಾಲ್ ಕೇರ್ ಪುಟ್ಟಿಯನ್ನು ವಶಪಡಿಸಿಕೊಳ್ಳಲಾಗಿದೆ. ಜೊತೆ ಅದರ ತಯಾರಿಗೆ ಬಳಸುತ್ತಿದ್ದ ಯಂತ್ರವನ್ನು ಜಪ್ತಿ ಮಾಡಲಾಗಿದೆ.

Share Post