Bengaluru

ರಾಜ್ಯ ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ ಸಿಕ್ಕಿದ್ದೇನು..?

ರಾಜ್ಯ ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ ಸಿಕ್ಕಿದ್ದೇನು..?

1. ಕೃಷಿ ಮತ್ತು ಪೂರಕ ಚಟುವಟಿಕೆಗಳಿಗೆ 33,700 ಕೋಟಿ. ರೂ. ಮೀಸಲು
2. `ರೈತ ಶಕ್ತಿ’ ಯೋಜನೆಯಡಿ ಕೃಷಿ ಯಂತ್ರೋಪಕರಣಗಳ ಬಳಕೆ ಉತ್ತೇಜನಕ್ಕೆ ಪ್ರತಿ ಎಕರೆಗೆ 250 ರೂ.ಗಳಂತೆ ಡೀಸೆಲ್‌ ಸಹಾಯಧನ, ಇದಕ್ಕಾಗಿ 600 ಕೋಟಿ. ರೂ. ಮೀಸಲು
3. ಕೆಪೆಕ್‌ ಮೂಲಕ ಕೃಷಿ ಉತ್ಪನ್ನಗಳ ಕೊಯ್ಲಿನೋತ್ತರ ನಿರ್ವಹಣೆ, ಮಾರಾಟ ಮತ್ತು ರಫ್ತು ಮಾಡಲು 50 ಕೋಟಿ ರೂ. ಅನುದಾನ
4. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪಿಪಿಪಿ ಮಾದರಿಯಲ್ಲಿ ಮಿನಿ ಆಹಾರ ಪಾರ್ಕ್‌ ಸ್ಥಾಪನೆಗೆ ನಿರ್ಧಾರ
5. ದ್ರಾಕ್ಷಿ ಬೆಳೆಯ ಸಂಗ್ರಹಣೆ, ಸಂಸ್ಕರಣೆ ಮತ್ತು ಸಾಗಾಣಿಕೆಗೆ ವಿಜಯಪುರ ಜಿಲ್ಲೆಯ ತೊರವಿಯಲ್ಲಿ 36 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಶೈತ್ಯ ಸಂಗ್ರಹ ವ್ಯವಸ್ಥೆ
6. ಬಡ್ಡಿ ರಿಯಾಯಿತಿ ಯೋಜನೆಯಡಿ 3 ಲಕ್ಷ ಹೊಸ ರೈತರೂ ಸೇರಿದಂತೆ 33 ಲಕ್ಷ ರೈತರಿಗೆ 24,000 ಕೋಟಿ ಸಾಲ ವಿತರಣೆ ಗುರಿ
7. ಗ್ರಾಮೀಣ ರೈತರಿಗೆ ಆರೋಗ್ಯ ಸೇವೆ ಒದಗಿಸಲು ಪರಿಷ್ಕೃತ ರೂಪದಲ್ಲಿ ಯಶಸ್ವಿ ಯೋಜನೆ ಮರುಜಾರಿ. ಇದಕ್ಕಾಗಿ 300 ಕೋಟಿ. ರೂ. ಅನುದಾನ
8. ಹಾವೇರಿಯಲ್ಲಿ ಮೆಗಾಡೈರಿ ಸ್ಥಾಪನೆಗೆ ನಿರ್ಧಾರ
9. ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆ
10. ಆಕಸ್ಮಿಕ ಕುರಿ/ಮೇಕೆ ಮರಣ ಹೊಂದಿದರೆ ಸಾಕಣಿಕೆದಾರರಿಗೆ/ವಲಸೆ ಕುರಿಗಾರರ ಕುಟುಂಬಕ್ಕೆ 5 ಲಕ್ಷ ರೂ. ವಿಮಾ ಸೌಲಭ್ಯ
11. 100 ಆಳ ಸಮುದ್ರ ಮೀನುಗಾರಿಕಾ ಹಡಗುಗಳಿಗೆ ನೆರವು ನೀಡಲು ‘ಮತ್ಸ್ಯ ಸಿರಿ’ ಯೋಜನೆ ಜಾರಿ
12. 57 ತಾಲ್ಲೂಕುಗಳಲ್ಲಿ 642 ಕೋಟಿ ರೂ. ವೆಚ್ಚದಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ
13. ಬಳ್ಳಾರಿ ಜಿಲ್ಲೆಯ ಹಗರಿ ಹಾಗೂ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ನೂತನ ಕೃಷಿ ಕಾಲೇಜು ಸ್ಥಾಪನೆ

Share Post