ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ಕರೆತರಲು ಸೋನು ಸೂದ್ ಸಹಾಯ ಹಸ್ತ
ದೆಹಲಿ: ಸಾಂಕ್ರಾಮಿಕ ರೋಗ ಕೊರೊನಾ ಸಮಯದಲ್ಲಿ ಸಾವಿರಾರು ಬಡವರಿಗೆ ಸಹಾಯ ಮಾಡಿ ಹೀರೋ ಎನಿಸಿಕೊಂಡಿದ್ದ ಸೋನು ಸೂದ್ ವಿದ್ಯಾರ್ಥಿಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಮತ್ತೊಮ್ಮೆ ಸಂರಕ್ಷಕನಾಗಿ ಹೊರಹೊಮ್ಮಿದ್ದಾರೆ. ತಮ್ಮ ಚಾರಿಟಿ ಮೂಲಕ ಸಾವಿರಾರು ಜನರಿಗೆ ಬದುಕು ನೀಡಿರುವ ನಟ ಈಗ ಉಕ್ರೇನ್ ಯುದ್ಧ ಭೂಮಿಯಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ವಾಪಸ್ ಭಾರತಕ್ಕೆ ತರಲು ತಮ್ಮ ತಂಡವನ್ನು ಕಾರ್ಯಾಚರಣೆಗಿಳಿಸಿದ್ದಾರೆ.
ಉಕ್ರೇನ್ನಿಂದ ಭಾರತಕ್ಕೆ ಬಂದಿಳಿದ ವಿದ್ಯಾರ್ಥಿಗಳು ತಮ್ಮನ್ನು ಸುರಕ್ಷಿತವಾಗಿ ವಾಪಸ್ ಕರೆತಂದ ಸೋನು ಸೂದ್ ಮತ್ತು ಭಾರತ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದರು. ಸೋನು ಸೂದ್ ಕೂಡ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್ ಹಾಕಿದ್ದಾರೆ. ‘ಉಕ್ರೇನ್ನಲ್ಲಿ ಸಿಲುಕಿರುವ ನಮ್ಮ ವಿದ್ಯಾರ್ಥಿಗಳನ್ನು ಕರೆತರುವ ಪ್ರತಯ್ನ ಮಾಡ್ತಿದ್ದೇವೆ. ನಮ್ಮ ವಿದ್ಯಾರ್ಥಿಗಳು ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಮತ್ತು ಅವರನ್ನು ಕರೆತರುವ ಪ್ರಯತ್ನ ಕೂಡ ಕ್ಲಿಷ್ಟಕರವಾಗಿದೆ. ಅದೃಷ್ಟವಶಾತ್ ನಾವು ಅನೇಕ ವಿದ್ಯಾರ್ಥಿಗಳನ್ನು ಗಡಿ ದಾಟಿಸುವ ಪ್ರಯತ್ನ ಮಾಡಿದ್ದೇವೆ. ಇನ್ನೂ ಪ್ರಯತ್ನಿಸುತ್ತಲೇ ಇರುತ್ತೇವೆ. ನಮಗೆ ಸಹಾಯ ಮಾಡಿದ ನಿಮಗೆ ಚಿರರುಣಿ @eoiromania @IndiaInPoland @meaindia ಧನ್ಯವಾದಗಳು. ಜೈ ಹಿಂದ್’. ಎಂದು ನೆರೆ ರಾಷ್ಟ್ರಗಳಿಗೆ ತಿಳಿಸಿದ್ದಾರೆ.
ಕೀವ್ ಹಾಗೂ ಖಾರ್ಕಿವ್ ನಿಂದ ವಿದ್ಯಾರ್ಥಿಗಳನ್ನು ಸುರಕ್ಷಿತ ಸ್ಥಳಗಳಿಗೆ ತಲುಪಿಸಲು ಟ್ಯಾಕ್ಸಿ, ಬಸ್ ವ್ಯವಸ್ಥೆ ಮಾಡಿದ್ದಾರೆ. ಅವರ ಸಹಕಾರ ಪಡೆದ ವಿದ್ಯಾರ್ಥಿಗಳು ವಿಡಿಯೋ ಮಾಡಿ ಸೋನು ಸೂದ್ಗೆ ಧನ್ಯವಾದ ತಿಳಿಸಿದ್ದಾರೆ. ನಾವು ಗಡಿ ದಾಟಿದ ಕೂಡಲೇ ನಮ್ಮನ್ನು ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣದವರೆಗೂ ಟಿಕೆಟ್ ಇಲ್ಲದೆ ಉಚಿತವಾಗಿ ಕರೆದೊಯ್ಯುವ ಕೆಲಸ ಮಾಡ್ತಿದಾರೆ ಸೋನು ಸೂದ್ ತಂಡ ಎಂದು ವಿದ್ಯಾರ್ಥಿನಿಯೊಬ್ಬಳು ವಿಡಿಯೋ ಹಂಚಿಕೊಂಡಿದ್ದಾರೆ. ಏನೇ ಆಗಲಿ ಜನರ ಕಷ್ಟಕ್ಕೆ ತಕ್ಷಣಕ್ಕೆ ಮಿಡಿಯುವ ಹೃದಯವಾಗಿ ಸೋನುಸೂದ್ ನಿಂತಿದ್ದಾರೆ.
It’s so nice to see our Real Hero @sonusood helping hundreds of students stuck in Ukraine to cross borders and reach safe places. Heroes like him keep the faith in humanity alive. #Indiansinukraine pic.twitter.com/cmKLZhMsyY
— ललित अग्रवाल ?? (@LalitAgarwalla_) March 2, 2022