ʻಆಪರೇಷನ್ ಗಂಗಾʼ ಕಾರ್ಯಾಚರಣೆಗಿಳಿದ ಭಾರತೀಯ ವಾಯುಸೇನೆ-ಮೋದಿ ಸೂಚನೆ
ದೆಹಲಿ: ‘ಆಪರೇಷನ್ ಗಂಗಾ’ ಹೆಸರಿನಲ್ಲಿ ಉಕ್ರೇನ್ ನಿಂದ ಭಾರತೀಯರನ್ನು ಕರೆತರುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಗಂಗಾ ಆಪರೇಷನ್‌ನಲ್ಲಿ ಭಾರತೀಯ ವಾಯುಪಡೆಯೂ ಭಾಗಿಯಾಗುವಂತೆ ಮೋದಿ ಕರೆ ನೀಡಿದ್ದಾರೆ. ಕಡಿಮೆ ಸಮಯದಲ್ಲಿ ಹೆಚ್ಚಿನ ಜನರನ್ನು ಕರೆತರಲು ವಾಯುಪಡೆಯಿಂದ ಮಾತ್ರ ಸಾಧ್ಯವಾಗುತ್ತದೆ ಎಂದು ಸರ್ಕಾರ ನಿರ್ದೇಶಿಸಿದೆ. ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಮಂಗಳವಾರ ಸ್ಲೋವಾಕಿಯಾಕ್ಕೆ ಸ್ಪೈಸ್‌ಜೆಟ್ ವಿಶೇಷ ವಿಮಾನ ತೆರಳಲಿದೆ. ಈ ರಕ್ಷಣಾ ಕಾರ್ಯಾಚರನೆ ಪರಿಶೀಲನೆಗಾಗಿ ಕೇಂದ್ರ ಸಚಿವ ಕಿರಣ್ ರಿಜಿಜು ಸ್ಲೋವಾಕಿಯಾಕ್ಕೆ ತೆರಳಲಿದ್ದಾರೆ.
ರಷ್ಯಾ ಪಡೆ ಉಕ್ರೇನ್ ರಾಜಧಾನಿ ಕೀವ್ ಅನ್ನು ಸುತ್ತುವರಿದಿರುವ ಹಿನ್ನೆಲೆಯಲ್ಲಿ ಕೀವ್‌ನಲ್ಲಿರುವ ಭಾರತೀಯರಿಗಾಗಿ ರಾಯಭಾರ ಕಚೇರಿ ಪ್ರಮುಖ ನಿರ್ದೇಶನಗಳನ್ನು ನೀಡಿದೆ. ಕೀವ್‌ನಲ್ಲಿರುವ ಎಲ್ಲಾ ಭಾರತೀಯರು ತಕ್ಷಣವೇ ಕೀವ್ ನಗರವನ್ನು ತೊರೆಯುವಂತೆ ಆದೇಶಿಸಿದೆ. ವಿದ್ಯಾರ್ಥಿಗಳು ಸೇರಿದಂತೆ ಕೀವ್‌ನಲ್ಲಿರುವ ಎಲ್ಲಾ ಭಾರತೀಯರು ನಗರವನ್ನು ತೊರೆಯಬೇಕು ಎಂದು ಭಾರತೀಯ ರಾಯಭಾರ ಕಚೇರಿ ಟ್ವೀಟ್‌ನಲ್ಲಿ ತಿಳಿಸಿದೆ. ಲಭ್ಯವಿರುವ ರೈಲುಗಳು ಅಥವಾ ಇತರ ವಿಧಾನಗಳ ಮೂಲಕ ತಕ್ಷಣವೇ ನಗರವನ್ನು ತೊರೆಯಲು ಸೂಚಿಸಿದೆ. ಯಾವುದೇ ಕ್ಷಣದಲ್ಲಾದ್ರೂ ಕೀವ್ ಮೇಲೆ ರಷ್ಯಾ ಭೀಕರವಾಗಿ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಭಾರತೀಯ ರಾಯಭಾರಿ ಕಚೇರಿ ಎಚ್ಚರಿಕೆ ನೀಡಿದೆ.