Districts

ಉಕ್ರೇನ್‍ನಲ್ಲಿರುವ ಬೀಳಗಿ ವಿದ್ಯಾರ್ಥಿನಿ ಸಹನಾಗೆ ಧೈರ್ಯ ತುಂಬಿದ ಸಚಿವ ನಿರಾಣಿ

ಬೀಳಗಿ:ಯುದ್ದ ಪೀಡಿತ ಯುಕ್ರೇನ್‍ನಲ್ಲಿ ಸಿಲುಕಿರುವ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ವೈದ್ಯಕೀಯ ವಿದ್ಯಾರ್ಥಿನಿ ಸಹನ ಪಾಟೀಲ್‍ಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ದೂರವಾಣಿ ವಿಡಿಯೋ ಕರೆ ಮಾಡಿ ಧೈರ್ಯಗೆಡದಂತೆ ಆತ್ಮಸ್ಥೈರ್ಯ ತುಂಬಿದರು.

ಇಂದು ಬೆಳಗ್ಗೆ ತಾಲ್ಲೂಕಿನ ಸುನಗ ಗ್ರಾಮದಲ್ಲಿರುವ ಸಹನಾ ತಂದೆ ಪಶು ಚಿಕಿತ್ಸಾಲಯದ ಸಹಾಯಕ ನಿರ್ದೇಶಕ ಮಲ್ಲನಗೌಡ ಪಾಟೀಲ್ ಅವರ ನಿವಾಸಕ್ಕೆ ಭೇಟಿ ನೀಡಿ, ಉಕ್ರೇನ್‍ನ ಕಾರ್ಕೀವ್ ಪಟ್ಟಣದ ವೈದ್ಯಕೀಯ ವಿದ್ಯಾರ್ಥಿನಿ ಸಹನ ಪಾಟೀಲ್ ಅವರ ಜೊತೆ ಕೆಲ ನಿಮಿಷಗಳ ವಿಡಿಯೋ ಕಾಲ್ ಮಾಡಿ ಸಚಿವರು, ಭಯಭೀತರಾಗದಂತೆ ಸಮಾಧಾನ ಹೇಳಿದರು.

ಉಕ್ರೇನ್‍ನ ಕಾರ್ಕೀವ್ ಪಟ್ಟಣದ ನ್ಯಾಷನಲ್ ಕಾರ್ಕೀವ್ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ವ್ಯಾಸಂಗ ಮಾಡುತ್ತಿರುವ ಸಹನ ಪಾಟೀಲ್, ಯುದ್ಧದ ಕಾರಣ ತಾಯ್ನಾಡಿಗೆ ಮರಳದೆ ಸಿಲುಕಿಕೊಂಡಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಇಂದು ವಿದ್ಯಾರ್ಥಿನಿಯ ಪೋಷಕರು, ಸಂಬಂಧಿಕರನ್ನು ಭೇಟಿ ಮಾಡಿದ ಅವರು, ವಿದ್ಯಾರ್ಥಿಗೆ ಎದೆಗುಂದದೆ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸಬೇಕು. ಆದಷ್ಟು ಶೀಘ್ರ ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರುವ ಜವಾಬ್ದಾರಿ ನಮ್ಮದು ಎಂದು ಅಭಯ ನೀಡಿದರು.

Share Post