Cinema

ಶಿವರಾತ್ರಿ ಹಬ್ಬದಂದು ಅವಳಿ ಮಕ್ಕಳಿಗೆ ಜನ್ಮ ನೀಡಿದ ಗೋಲ್ಡನ್‌ ಕ್ವೀನ್-ಅಭಿಮಾನಿಗಳಿಂದ ಶುಭ ಹಾರೈಕೆ

ಬೆಂಗಳೂರು: ಗೋಲ್ಡನ್‌ ಕ್ವೀನ್‌ ನಟಿ ಅಮೂಲ್ಯ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಸಿವರಾಥ್ರಿ ಹಬ್ಬದಂದು ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ಹಂಚಿದ್ದಾರೆ. ಈ ವಿಚಾರವನ್ನ ಅಮೂಲ್ಯ ಪತಿ ಜಗದೀಶ್‌ ಅವರು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡು ಸಂಭ್ರಮಿಸಿದ್ದಾರೆ. ಅಮೂಲ್ಯ ಮತ್ತು ಇಬ್ಬರು ಮಕ್ಕಳು ಆರೋಗ್ಯವಾಗಿದ್ದಾರೆಂದು ತಿಳಿಸಿದ್ದಾರೆ. ತಾಯಿ ಮತ್ತು ಮಕ್ಕಳನ್ನು ಹರಸಿದ ಪ್ರತಿಯೊಬ್ಬರಿಗೂ ಜಗದೀಶ್‌ ಧನ್ಯವಾದಗಳನ್ನು ತಿಳಿಸಿದ್ದಾರೆ.

ಇಂದು ಬೆಳಗ್ಗೆ ಹೆರಿಗೆ ನೋವು ಕಾಣಿಸಿಕೊಂಡ ಬಳಿಕ ಅಮೂಲ್ಯರನ್ನ ಜಯನಗರದಲ್ಲಿರಯವ ಕ್ಲೈಡ್‌ ನೈಟ್‌ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಬೆಳಗ್ಗೆ 11.45ಕ್ಕೆ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದರು ಎನ್ನಲಾಗಿದೆ. ಅಮೂಲ್ಯ ದಂಪತಿಗೆ ಸ್ಯಾಂಡಲ್‌ವುಡ್‌ ಶುಭ ಹಾರೈಕೆಗಳನ್ನು ತಿಳಿಸಿದ್ದಾರೆ.

 

Share Post