ಉಕ್ರೇನ್‌ನಿಂದ ಬರುತ್ತಿರುವ ವಿದ್ಯಾರ್ಥಿಗಳ ನೆರವಿಗೆ ರಾಜ್ಯದಿಂದ ಇಬ್ಬರು ಅಧಿಕಾರಿಗಳ ನೇಮಕ-ಸಿಎಂ
ಬೆಂಗಳೂರು: ಉಕ್ರೇನ್ನಲ್ಲಿ ರಷ್ಯಾ ಹೋರಾಟ ತೀವ್ರ ಗತಿಯಲ್ಲಿ ನಡೆಯುತ್ತಿದೆ. ಯುದ್ಧದಿಂದ ಕಂಗೆಟ್ಟು ಭಾರತಕ್ಕೆ ಬರಲು ವಿದ್ಯಾರ್ಥಿಗಳು, ನಾಗರೀಕರು ಮನವಿ ಮಾಡಿಕೊಳ್ತಿದಾರೆ. ಈಗಾಗಲೇ ಸಾವಿರಾರು ಜನರನ್ನು ಕರೆತರಲಾಗಿದೆ. ಆಪರೇಷನ್ ಗಂಗಾ ಇನ್ನೂ ಮುಂದುವರೆದಿದೆ. ಈ ನಿಟ್ಟಿನಲ್ಲಿ ಉಕ್ರೇನ್‌ನಿಂದ ಕನ್ನಡದವರನ್ನು ಕರೆತರುವ ಪ್ರಯತ್ನ ನಿರಂತರವಾಗಿ ಜಾರಿಯಲ್ಲಿದ್ದು, ಮುಂಬೈ ಹಾಗೂ ನವದೆಹಲಿಗೆ ಬರುತ್ತಿರುವ ವಿದ್ಯಾರ್ಥಿಗಳನ್ನು ಅವರ ಊರುಗಳಿಗೆ ಕಳುಹಿಸಲು ನೆರವು ಒದಗಿಸಲು ಮುಂಬೈನಲ್ಲಿ ಇಬ್ಬರು ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಉಕ್ರೇನ್‌ನ ಈಶಾನ್ಯ ಭಾಗದಲ್ಲಿರುವ ಕನ್ನಡದ ವಿದ್ಯಾರ್ಥಿಗಳು ಸಂಕಷ್ಟದಲ್ಲಿದ್ದಾರೆ. ವಿದೇಶಾಂಗ ಸಚಿವರೊಂದಿಗೆ ಮಾತನಾಡಿ ಅವರಿಗೆ ಊಟ ವಸತಿ ವ್ಯವಸ್ಥೆ ಮಾಡಲು ಹಾಗೂ ಅವರನ್ನು ಸುರಕ್ಷಿತ ಸ್ಥಳಗಳಿಗಳಿಗೆ ಕಳುಹಿಸಲು ಮಾರ್ಗದರ್ಶನ ನೀಡುವಂತೆ ಕೋರಲಾಗಿದೆ ಎಂದರು.
ರೋಮಾನಿಯಾ ಗಡಿಯಲ್ಲಿ ಜನದಟ್ಟಣೆ ಹೆಚ್ಚಾಗುತ್ತಿದ್ದು, ಕನ್ನಡಿಗರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲು ಕೋರಲಾಗಿದೆ ಎಂದು ಸಿಎಂ ತಿಳಿಸಿದರು.