Bengaluru

ಮೇಕೆದಾಟು ಪಾದಯಾತ್ರೆಯಿಂದ ಟ್ರಾಫಿಕ್‌ ಕಿರಿಕಿರಿ ಉಂಟಾಗಲಿದೆ, ದಯವಿಟ್ಟು ಕ್ಷಮಿಸಿ-ಡಿ.ಕೆ.ಶಿವಕುಮಾರ್

ಬೆಂಗಳೂರು:  ಮೇಕೆದಾಟು ಪಾದಯಾತ್ರೆಯಿಂದ ಬೆಂಗಳೂರಿನಲ್ಲಿ ಮೂರು ದಿನಗಳ ಕಾಲ ಟ್ರಾಫಿಕ್‌ ಉಂಟಾಗಲಿದೆ. ದಯವಿಟ್ಟು ಸಾರ್ವಜನಿಕರು ಸಹಕರಿಸಬೇಕೆಂದು ಡಿಕೆಶಿ ಮನವಿ ಮಾಡಿದ್ದಾರೆ. ಕಾಂಗ್ರೆಸ್‌ ನೇತೃತ್ವದಲ್ಲಿ ಮೇಕೆದಾಟು ಪಾದಯಾತ್ರೆ ನಡೆಯುತ್ತಿದೆ. ಪಕ್ಷಬೇಧ ಮತರೆತು ಜನ ಸಹಕಾರ ನೀಡುತ್ತಿದ್ದಾರೆ. ಎಲ್ಲಾ ಸಂಘ ಸಂಸ್ಥೆಗಳು, ಮಠಾಧೀಶರು ಇಂದು ನಮಗೆ ಬೆಂಬಲ ನೀಡ್ತಿದಾರೆ. ಹೆಜ್ಜೆ ಹಾಕುತ್ತೇವೆ..ಹೆಜ್ಜೆ ಹಾಕುತ್ತೇವೆ ಕಾವೇರಿ ನೀರಿಗಾಗಿ ಹೆಜ್ಜೆ ಹಾಕುತ್ತೇವೆ. ಆರು ದಿನಗಳ ಕಾಲ ಪಾದಯಾತ್ರೆ ಮುಗಿಸಿದ್ದೇವೆ. ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ಪಾದಯಾತ್ರೆ ನಡೆಸಿ ಮಾರ್ಚ್‌ 3ರಂದು ಕೊನೆಗೊಳಿಸುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ತಿಳಿಸಿದ್ರು.

ನ್ಯಾಷನಲ್‌ ಕಾಲೇಜಿನಲ್ಲಿ ಮೂರರಂದು ಬೃಹತ್‌ ಸಭೆ ಹಮ್ಮಿಕೊಂಡಿದೇವೆ. ಈ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ಟ್ರಾಫಿಕ್‌ ಕಿರಿ ಕಿರಿ ಉಂಟಾಗುತ್ತದೆ. ಅದಕ್ಕಾಗಿ ನಾನು ನಿಮ್ಮಲ್ಲಿ ಕ್ಷಮಾಪಣೆ ಕೇಳುತ್ತಿದ್ದೇನೆ. ಈ ಮೂರು ದಿನಗಳ ತೊಂದರೆ ಮುಂದಿನ ಮೂವತ್ತು ವರ್ಷಗಳ ಕಾಲ ಪ್ರತಿಯೊಬ್ಬ ನಾಗರೀಕನಿಗೂ ಕಾವೇರಿ ನೀರು ಸಿಗುತ್ತದೆ. ನ್ಮೊಂದಿಗೆ ಸಹಕಾರ ನೀಡಿ, ನಿಮಗಾಗಿ ಹೋರಾಟ ಮಾಡ್ತಿದ್ದೇವೆ. ನಿಮ್ಮ ಧ್ವನಿಯಾಗಿ ನಾವು ಕೆಲಸ ಮಾಡ್ತಿದ್ದೇವೆ. ಟ್ರಾಫಿಕ್‌ ಉಂಟಾದ್ರೆ ದಯವಿಟ್ಟು ನಮ್ಮನ್ನು ಕ್ಷಮಿಸಿ. we are walk For water ಎಲ್ಲರೂ ನಮ್ಮೊಂದಿಗೆ ಕೈ ಜೋಡಿಸಿ ಎಂದು ಡಿ.ಕೆ.ಶಿವಕುಮಾರ್‌ ಮನವಿ ಮಾಡಿಕೊಂಡಿದ್ದಾರೆ.

Share Post