International

ಗಡಿಯಲ್ಲಿ ರಷ್ಯಾ ಸೈನಿಕರ ಅಟ್ಟಹಾಸ-ವಿದ್ಯಾರ್ಥಿಗಳನ್ನ ಹಿಂಸಿಸುತ್ತಿರುವ ವಿಡಿಯೋ ವೈರಲ್, ರಾಹುಲ್‌ ಕಿಡಿ

ಉಕ್ರೇನ್:‌ ರಷ್ಯಾ ಉಕ್ರೇನ್‌ ಮೇಲೆ ಯುದ್ಧ ಸಾರಿ ಇಂದುಗೆ ಐದು ದಿನಗಳು ಕಳೆದಿವೆ. ಅನ್ನ, ನೀರಿಲ್ಲದೆ ಭಾರತೀಯ ವಿದ್ಯಾರ್ಥಿಗಳು, ಪ್ರಜೆಗಳು ಸೇರಿದಂತೆ ಅಲ್ಲಿನ ನಾಗರೀಕರು ಪರಿತಪಿಸುತ್ತಿದ್ದಾರೆ. ಪ್ರಾಣಭಯದಿಂದ ಜನ ಬಂಕರ್‌ಗಳಲ್ಲಿ ತಲೆಮರೆಸಿಕೊಂಡಿದ್ದರೆ. ತಾಯ್ನಾಡಿಗೆ ಮರಳಲು  ಹಲವು ವಿದ್ಯಾರ್ಥಿಗಳುನ ಕಾಲ್ನಡಿಗೆಯಲ್ಲೇ ಗಡಿ ದಾಟುತ್ತಿದ್ದಾರೆ. ಹೀಗಿರುವಾಗ ಗಡಿಯಲ್ಲಿರುವ ರಷ್ಯಾ ಸೈನಕರು ವಿದ್ಯಾರ್ಥಿಗಳಿಗೆ ಚಿತ್ರಹಿಂಸೆ ನೀಡ್ತಿರುವ ವಿಡಿಯೋ ವೈರಲ್‌ ಆಗಿದೆ.

ಭಾರತಕ್ಕೆ ವಾಪಸಾಗಲು ವಿದ್ಯಾರ್ಥಿಗಳು ರೊಮ್ಯಾನಿಯಾ ಹಾಗೂ ಪೋಲೆಂಡ್‌ ಗಡಿ ಭಾಗಕ್ಕೆ ಕಾಲ್ನಡಿಗೆಯಲ್ಲಿ ಬಂದಿದ್ದಾರೆ. ಈ ವೇಳೆ ವಿದ್ಯಾರ್ಥಿಗಳ ಮೇಲೆ ರಷ್ಯಾ ಸೇನೆ ಅಟ್ಟಹಾಸ ಮೆರೆದಿದೆ. ಚಿತ್ರಹಿಂಸೆ ನೀಡುತ್ತಿರುವ ವಿಡಿಯೋ ವೈರಲ್‌ ಆಗಿದೆ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಟ್ವಿಟ್ಟರ್‌ನಲ್ಲಿ ಪೋಸ್ಟ್‌ ಮಾಡಿ, ಕೂಡಲೇ ಸರ್ಕಾರ ವಿದ್ಯಾರ್ಥಿಗಳನ್ನು ವಾಪಸ್‌ ಕರೆಸಿಕೊಳ್ಳಬೇಕು. ಸರ್ಕಾರ ಇದುವರೆಗೂ ಏನೇನು ಕ್ರಮಗಳನ್ನು ಕೈಗೊಂಡಿದೆ ಎಂದು ಪ್ರಶ್ನೆ ಮಾಡಿದೆ. ಹಿಂಸಿಸುತ್ತಿರುವ ವಿಡಿಯೋ ನೋಡೋಕೆ ಆಗುತ್ತಿಲ್ಲ. ಇದನ್ನು ವಿದ್ಯಾರ್ಥಿಗಳ ಪೋಷಕರು ನೋಡಿದ್ರೆ  ಎಷ್ಟು ನೋವನ್ನು ಅನುಭವಿಸುತ್ತಾರೆ. ಯಾವುದೇ ಕಾರಣಕ್ಕೂ ನಮ್ಮವರನ್ನು ಬಿಟ್ಟು ಕೊಡುವ ಮಾತೇ ಇಲ್ಲ. ಈ ಕೂಡಲೇ ಸರ್ಕಾರ ವಿದ್ಯಾರ್ಥಿಗಳನ್ನು ಕರೆಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

Share Post