ಬರ್ತಡೇ ಪಾರ್ಟಿ ಯಡವಟ್ಟು, ಪತ್ನಿ ನಾಪತ್ತೆ-ಪತಿ ಫೇಸ್ಬುಕ್‌ನಲ್ಲಿ RIPಪೋಸ್ಟ್
ದೊಡ್ಡಬಳ್ಳಾಪುರ: ಸಂಬಂಧಿಕರ ಮನೆಗೆ ಬರ್ತಡೆ ಪಾರ್ಟಿಗೆ ಹೋಗಿದ್ದೇ ಯಡವಟ್ಟಾಗಿದ್ದು ನೋಡಿ, ಪಾರ್ಟಿಗೆ ಬೇಡ ಅಂತ ಗಂಡ, ಹೋಗ್ಬೇಕು ಅಂತ ಹೆಂಡ್ತಿ. ಹೇಗೋ ಪಾರ್ಟಿಗೆ ಹೋಗಿ ಬಂದ ಮೇಲೆ ಪತ್ನಿ ನಾಪತ್ತೆಗಾಇರುವ ಗಟನೆ ದೊಡ್ಡಬಳ್ಳಾಪುರದ ಊದನಹಳ್ಳಿ ಬಳಿ ನಡೆದಿದೆ. ಪಾರ್ಟಿ ಮುಗಿಸಿಕೊಂಡು ಬಂದ ಬಳಿಕ ಪತಿ-ಪತ್ನಿ ನಡುವೆ ಜಗಳವಾಗಿದೆ. ಅಷ್ಟೇ ಬೆಳಗಾಗುವಷ್ಟರಲ್ಲಿ ಪತ್ನಿ ಮನೆಯಿಂದ ನಾಪತ್ತೆ. ಇತ್ತ ನೋಡುದ್ರೆ ಪತಿಯ ಫೇಸ್ಬುಕ್ ಪೇಜ್‌ನಲ್ಲಿ ಹೆಂಡಿತಿ ಸತ್ತಿದ್ದಾಳೆಂದು RIP ಎಂದು ಪೋಸ್ಟ್ ಮಾಡಲಾಗಿದೆ.
ಇದನ್ನು ಕಂಡ ಯುವತಿ ಮನೆಯವರು ತನ್ನ ಮಗಳನ್ನು ಕೊಲೆ ಮಾಡಿದ್ದಾನೆ ಎಂದು ಅಳಿಯನ ಮೇಲೆ ಲೀಲಾವತಿ ಪೋಷಕರು ಆರೋಪ ಮಾಡ್ತಿದಾರೆ. ಆದರೆ ನಾನು ಕೊಲೆ ಮಾಡಿಲ್ಲ ನನ್ನ ಖಾತೆಯಲ್ಲಿ ಅವಳೇ ಪೋಸ್ಟ್ ಹಾಕಿ ನಾಪತ್ತೆಯಾಗಿದ್ದಾಳೆಂದು ಮುನಿಕೃಷ್ಣ ಹೇಳ್ತಿದಾನೆ. ಘಟನೆ ಸಂಬಂಧ ದೊಡ್ಡಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪತಿಯ ಫೇಸ್ಬುಕ್ ಪೋಸ್ಟ್ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಕಾಣೆಯಾಗಿರುವ ಯುವತಿ ಲೀಲಾವತಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.